ಮಡಿಕೇರಿ, ಜು. 23 : ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನಲ್ಲಿ 2018-19ನೇ ಶೈಕ್ಷಣಿಕ ವರ್ಷದಿಂದ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಆರಂಭಿಸಲಾಗುತ್ತಿದ್ದು, ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ತಾ. 25 ರಂದು ಮಧ್ಯಾಹ್ನ 2 ಗಂಟೆಗೆ ಕಾಲೇಜಿನ ಕಾವೇರಿ ಸಭಾಂಗಣದಲ್ಲಿ ಪ್ರಾಂಶುಪಾಲ ಪಟ್ಟಡ ಪೂವಣ್ಣ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕಾಲೇಜು ಶಿಕ್ಷಣ ಕೇವಲ ಅಂಕಗಳಿಗಾಗಿ ಮಾತ್ರವಲ್ಲ, ಬದಲಿಗೆ ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಎಂಬ ನಿಟ್ಟಿನಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಪ್ರಥಮ ಬಿ.ಕಾಂ ತರಗತಿಗೆ ಯೋಗಾಭ್ಯಾಸ ತರಬೇತಿ, ದ್ವಿತೀಯ ಬಿ.ಕಾಂ ತರಗತಿಗೆ ಪತ್ರಿಕೋದ್ಯಮ ತರಬೇತಿ ಹಾಗೂ ಅಂತಿಮ ಬಿ.ಕಾಂ ವಿದ್ಯಾರ್ಥಿಗಳಿಗೆ ಕಮ್ಯೂನಿಕೇಟಿವ್ ಇಂಗ್ಲೀಷ್ ತರಬೇತಿಯನ್ನು ನಡೆಸಲಾಗುವದು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಕ್ತಿದಿನಪತ್ರಿಕೆಯ ಸಂಪಾದಕರಾದ ಚಿದ್ವಿಲಾಸ್, ನಿವೃತ ಪ್ರಾಂಶುಪಾಲೆ ಭಾಗೀರಥಿ, ಭಾರತೀಯ ವಿದ್ಯಾಭವನ ಯೋಗಶಿಕ್ಷಕ ಮಹೇಶ್ ಕೆ.ಕೆ ಹಾಗೂ ಅಥಿತಿಗಳಾಗಿ ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಾದಪ್ಪ ಭಾಗವಹಿಸಲಿದ್ದಾರೆ.