ಸುಂಟಿಕೊಪ್ಪ, ಜು. 24: ಸುಂಟಿಕೊಪ್ಪ ಗದ್ದೆಹಳ್ಳದ ದೇವರಾಜ್ ಅವರ ತೋಟಕ್ಕೆ ಕಾಡಾನೆಗಳು ಲಗ್ಗೆಯಿಟ್ಟು ಫಸಲುಗಳನ್ನು ನಾಶಗೊಳಿಸಿವೆ.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ನಾರ್ಗಣೆ ಗ್ರಾಮದಲ್ಲಿರುವ ಗದ್ದೆಹಳ್ಳದ ದೇವರಾಜ್ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ತೋಟದಲ್ಲಿರುವ ಬಾಳೆ, ಕಾಫಿ, ತೆಂಗು, ಅಂಜುರಾ, ನೇರಳೆ, ಅಡಿಕೆ ಪÀsÀಸಲುಗಳನ್ನು ಸಂಪೂರ್ಣವಾಗಿ ನಾಶ ಮಾಡಿ ಕೆರೆ ದಂಡೆಯನ್ನು ತುಳಿದು ಕೆರೆಗೆ ಅಳವಡಿಸಿದ ನೀರಿನ ಪೈಪ್ ಗೇಟ್ ವಾಲ್ನ್ನು ತುಳಿದು ನಷ್ಟಪಡಿಸಿವೆ.
ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಗುಂಪು ತೋಟಗಳಲ್ಲಿ ಬೀಡುಬಿಟ್ಟ್ಟಿದ್ದು, ತೋಟದ ಕಾರ್ಮಿಕರು, ಮಾಲೀಕರು ಜೀವಭಯದಿಂದ ಕಾಲ ಕಳೆಯುವಂತಾಗಿದೆ. ಕಾಡಾನೆಗಳು ಸಂಚರಿಸುವ ಸ್ಥಳಗಳಲ್ಲಿ ಕಾಫಿ ಗಿಡಗಳು ಸಂಪೂರ್ಣ ಹಾಳಾಗುತ್ತಿವೆ. ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಕಾಡಾನೆ ಹಾವಳಿಯಿಂದ ನಮ್ಮನ್ನು ಪಾರು ಮಾಡಲಿ, ನಾಡಿಗೆ ಬಂದ ಕಾಡಾನೆಯನ್ನು ಕಾಡಿಗೆ ಅಟ್ಟುವ ಕೆಲಸಕ್ಕೆ ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.