ಚೆಟ್ಟಳ್ಳಿ, ಜು. 23: ಸಮೀಪದ ಕಂಡಕರೆಯ ಮರದಾಳು ರವಿ ಸುಬ್ಬಯ್ಯ ಅವರ 1.50 ವರೆ ಏಕರೆ ಬಾಳೆ ಗದ್ದೆ ಕಳೆದ ರಾತ್ರಿ 7 ಗಜಪಡೆಗಳು ನುಗ್ಗಿ ಗದ್ದೆಯನ್ನು ನಾಶ ಪಡಿಸಿವೆ. 7ಕ್ಕೂ ಹೆಚ್ಚು ಆನೆಗಳು ಬಾಳೆ ಗದ್ದೆಯನ್ನು ಸರ್ವ ನಾಶ ಮಾಡಿ ಹಾನಿ ಉಂಟಾಗಿದೆ ಎಂದು ರವಿ ಸುಬ್ಬಯ್ಯ ತಿಳಿಸಿದ್ದಾರೆ. ಬ್ಯಾಂಕ್ನಲ್ಲಿ 1 ಲಕ್ಷಕ್ಕೂ ಹೆಚ್ಚು ರೂ. ಸಾಲ ಮಾಡಿದ್ದೇನೆ. ಇದೀಗ ಬಾಳೆ ಗದ್ದೆಯೂ ಸಂಪೂರ್ಣ ನಾಶವಾಗಿದೆ. ಸೂಕ್ತ ಪರಿಹಾರ ನೀಡಬೇಕಾಗಿ ಒತ್ತಾಯಿಸಿದರು.