ಕೂಡಿಗೆ, ಜು. 24: ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಬಹುದಿನಗಳ ಬೇಡಿಕೆಯಾಗಿದ್ದ ಕಟ್ಟಡದ ಕಾಮಗಾರಿಗೆ ಸರ್ಕಾರದ ಹಣಕಾಸು ಇಲಾಖೆ ತಾತ್ವಿಕ ಸಿಕ್ಕಿದೆ ಎಂದು ಕಾಲೇಜು ಪ್ರಾಂಶುಪಾಲ ತಿಳಿಸಿದ್ದಾರೆ. ಕಾಲೇಜು ಅಭಿವೃದ್ಧಿ ಸಭೆಯಲ್ಲಿ ಸಭೆಗೆ ಮಾಹಿತಿ ನೀಡಿದರು.
ಕಳೆದ ಸಾಲಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯು ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರ ಮಾರ್ಗದರ್ಶನದಲ್ಲಿ ಆರ್.ಐ.ಡಿ.ಎಫ್.ಗೆ ಮನವಿಯನ್ನು ಸಲ್ಲಿಸಲಾಯಿತು. ಇದರ ಮೂಲಕ ಜಿ.ಪಂ.ನ ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಒಂದು ಕೋಟಿಯಷ್ಟು ಹಣ ಕಟ್ಟಡ ಕಾಮಗಾರಿಗಾಗಿ ಜಿ.ಪಂ. ಅಧೀನಕ್ಕೆ ಬಂದಿರುತ್ತದೆ. ಮುಂದಿನ ದಿನಗಳಲ್ಲಿ ಜಿ.ಪಂ. ಮೂಲಕ ಟೆಂಡರ್ ಪ್ರಕ್ರಿಯೆ ನಡೆಯಬೇಕಾಗಿದೆ.
ಸಭೆಯಲ್ಲಿ ಕಾಲೇಜಿನ ತಡೆಗೋಡೆ ಹಾಗೂ ಕಾಲೇಜಿಗೆ ಕಟ್ಟಡ ಮಳೆಯಿಂದ ಸೋರುತ್ತಿರುವದರಿಂದ ಮೇಲ್ಚಾವಣಿ ಅಳವಡಿಸುವ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಕುಮಾರಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕರಾದ ಕೆ.ಕೆ. ನಾಗರಾಜಶೆಟ್ಟಿ, ಕೃಷ್ಣ ಸೇರಿದಂತೆ ಕಾಲೇಜಿನ ಉಪನ್ಯಾಸಕರ ವೃಂದದವರು ಹಾಜರಿದ್ದರು.