ಶನಿವಾರಸಂತೆ, ಜು. 23: ಇಂದಿನ ಯುವಜನಾಂಗವು ಕೃಷಿ ಜೀವನವನ್ನು ಮೈಗೂಡಿಸಿಕೊಳ್ಳು ವಂತಾಗಲಿ ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಕೆಸರುಗದ್ದೆ ಕ್ರೀಡಾಕೂಟ ಹಾಗೂ ನಾಟಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿದೆ ಎಂದು ಕಾವೇರಿ ವಿದ್ಯಾಸಂಸ್ಥೆ ಪ್ರಾಂಶುಪಾಲ ಎಚ್.ಎನ್. ದೇವರಾಜ್ ಅಭಿಪ್ರಾಯಪಟ್ಟರು.

ಪ್ರಜ್ವಲ ಎಜುಕೇಶನ್ ಟ್ರಸ್ಟ್‍ನ ಕಾವೇರಿ ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಗಳಿಗಾಗಿ ಕಾಲೇಜು ಸಮೀಪದ ಕುಶಾಲಪ್ಪ ಅವರ ಗದ್ದೆಯಲ್ಲಿ ಏರ್ಪಡಿಸಿದ್ದ ಕೆಸರುಗದ್ದೆ ಕ್ರೀಡಾಕೂಟ ಹಾಗೂ ನಾಟಿ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿ ದರು.

ಜನಾಂಗದ ಜತೆ ಯುವಪೀಳಿಗೆ ವೈವಿಧ್ಯಮಯ ಕೃಷಿಯನ್ನು ಅವಲಂಬಿಸಿ ಆರ್ಥಿಕ ಶಕ್ತಿಯನ್ನು ಮೈಗೂಡಿಸಿಕೊಳ್ಳಲಿ. ನೆಮ್ಮದಿಯ ಜೀವನ ಮರುಕಳಿಸುವಲ್ಲಿ ಪರಿಸರಕ್ಕೆ ಹೊಂದಿಕೊಂಡಿರುವ ಕೃಷಿಯ ಬಗ್ಗೆ ಒಲವನ್ನು ಮೂಡಿಸಿಕೊಳ್ಳಲಿ ಎಂದು ಪ್ರಾಂಶುಪಾಲರು ಕರೆ ನೀಡಿದರು.

ಟ್ರಸ್ಟ್‍ನ ಅಧ್ಯಕ್ಷ ಎಚ್.ಪಿ. ಗುಂಡಪ್ಪ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಭತ್ತದ ವ್ಯವಸಾಯದ ಬಗ್ಗೆ ಅರಿವು ಮೂಡಿಸಿದರು. ಕಾರ್ಯದರ್ಶಿ ಜೆ.ಎಂ. ಪೂವಯ್ಯ, ಸದಸ್ಯರಾದ ಜಿ.ವಿ. ತಿಮ್ಮಪ್ಪ, ಮುಖ್ಯ ಶಿಕ್ಷಕ ಎಚ್.ಎನ್. ಹೂವಯ್ಯ, ವಿ.ಸಿ. ಸಂತೋಷ್ ಕುಮಾರ್, ಶಿಕ್ಷಕರು, ಉಪನ್ಯಾಸಕರು ಹಾಜರಿದ್ದರು.