ಮಡಿಕೇರಿ, ಜು. 24: ಜಿಲ್ಲೆಗೆ ಭೂ ವಿಜ್ಞಾನಿಗಳ ತಂಡ ಆಗಮಿಸಿದೆ. ಕೇಂದ್ರ ಗಣಿ ಸಚಿವಾಲಯದ ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ನಿರ್ದೇಶಕ ಕೆ.ವಿ. ಮಾರುತಿ, ಹಿರಿಯ ಭೂ ವಿಜ್ಞಾನಿಗಳಾದ ಯಜಾಸ್ ಅಹ್ಮದ್, ಅಂಕುರ್ ಶ್ರೀವಾತ್ಸವ್, ಯೋಜನಾ ವಿಜ್ಞಾನಿ ರಮೇಶ್ ದಿಕ್ಪಾಲ್ ಇವರುಗಳು ಇಂದು ಮಡಿಕೇರಿಗೆ ಆಗಮಿಸಿದರು.ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಭೂಕಂಪನÀದ ಕುರಿತು ಈ ತಂಡ ವೈಜ್ಞಾನಿಕ ಅಧ್ಯಯನ ನಡೆಸಲಿದೆ. ಅಲ್ಲದೆ, ಕೊಡಗಿನಲ್ಲಿ ಪ್ರಸಕ್ತ ಸಾಲಿನಲ್ಲಿ ಭಾರೀ ಮಳೆಯಿಂದ ಅಲ್ಲಲ್ಲಿ ಉಂಟಾದ ಭೂಕುಸಿತ, ಭೂಮಿಯಲ್ಲಿ ಬಿರುಕು ಮೊದಲಾದ ಸನ್ನಿವೇಶಗಳ ಕುರಿತು ಮಾಕುಟ್ಟ ಸೇರಿದಂತೆ ಕೆಲವು ಸ್ಥಳಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಲಿರುವದಾಗಿ ತಿಳಿದು ಬಂದಿದೆ. ಈ ಸಂಬಂಧ ಇಂದು ಈ ವಿಜ್ಞಾನಿಗಳು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರೊಂದಿಗೆ ಸಮಾಲೋಚನೆ ನಡೆಸಿದರು.ರಾಜ್ಯ ಕಂದಾಯ ಇಲಾಖಾ ಪ್ರಧಾನ ಕಾರ್ಯದರ್ಶಿ ಗಂಗಾರಾಂ ಬಡೇರಿಯಾ ಅವರ ನಿರ್ದೇಶನದ ಅನ್ವಯ ಈ ತಂಡ ಜಿಲ್ಲೆಗೆ ಆಗಮಿಸಿದೆ. ಕೊಡಗಿನಲ್ಲಿ 3.1 ರಿಕ್ಟರ್ ಮಾಪನ ಪ್ರಮಾಣದ ಭೂಕಂಪನ ಜುಲೈ 9 ರಂದು ಸಂಭವಿಸಿದೆ. ಆ ಬಳಿಕವೂ ಜಿಲ್ಲೆಯ ಅನೇಕ ಭಾಗಗಳಲ್ಲಿ ಭೂಕುಸಿತಗಳುಂಟಾಗಿವೆ. ಅನೇಕ ಕಡೆ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರಿಂದಾಗಿ ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನದ ಮೂಲಕ ಸಮರ್ಪಕ ಮಾಹಿತಿ ಪಡೆದು ಜನರ ಆತಂಕ ನಿವಾರಣೆಗೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ನಿರ್ಧರಿಸಲು ಈ ಸಮೀಕ್ಷೆÀ್ಷಗೆ ವ್ಯವಸ್ಥೆಗೊಳಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಗಂಗಾರಾಂ ಬಡೇರಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ 2013 ರಲ್ಲಿಯೂ ಇದೇ ರೀತಿಯ (ಮೊದಲ ಪುಟದಿಂದ) ಘಟನೆಗಳು ಆಗಿನ ತೀವ್ರ ಮಳೆಗಾಲ ಸಂದರ್ಭ ಸಂಭವಿಸಿತ್ತು. ಪ್ರತಿ ವರ್ಷವೂ ಮಳೆಗಾಲದಲ್ಲಿ ಇಂತಹ ಆತಂಕ ತಲೆದೋರುತ್ತಿದೆ. ತಾನು ಈ ಹಿಂದೆಯೂ ಕೊಡಗಿನಲ್ಲಿ ಸಂಭವಿಸಿದ ಭೂಕಂಪನ, ಭೂಕುಸಿತಗಳ ಬಗ್ಗೆ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಕಳುಹಿಸಿದ್ದೆ ಎಂದು ನಿರ್ದೇಶಕ ಕೆ.ವಿ.ಮಾರುತಿ “ಶಕ್ತಿ” ಯೊಂದಿಗೆ ನುಡಿದರು. ಜಿಲ್ಲೆಯ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸ್ಟಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಅವರು ವಿವರಿಸಿದ್ದಾರೆ.