ಮಡಿಕೇರಿ, ಜು. 23: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಮಳೆಯ ತೀವ್ರತೆ ಕಡಿಮೆಯಾಗಿದೆ. ಹಿಂದಿನ ರಾತ್ರಿ ಮಡಿಕೇರಿ ನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಹಿಂದಿನ 24 ಗಂಟೆಗಳಲ್ಲಿ ಕೊಡಗಿನಲ್ಲಿ ಸರಾಸರಿ 1.56 ಇಂಚು ಮಳೆಯಾಗಿದೆ.

ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ 95.45 ಇಂಚು ಸರಾಸರಿ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಗೆ 45.89 ಇಂಚು ಮಳೆ ದಾಖಲಾಗಿತ್ತು. ಪ್ರಸಕ್ತ ಅವಧಿಗೆ ಸರಾಸರಿ 50 ಇಂಚು ಅಧಿಕ ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ವರ್ಷಾರಂಭದಿಂದ ಇದುವರೆಗೆ 133.47 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 62.48 ಇಂಚು ಮಳೆಯಾಗಿತ್ತು. ವೀರಾಜಪೇಟೆ ತಾಲೂಕಿಗೆ ಈ ಸಾಲಿನಲ್ಲಿ 77.79 ಇಂಚು ಸರಾಸರಿ ಮಳೆಯಾಗಿದ್ದು, ಹಿಂದಿನ ವರ್ಷ ಇದೇ ಅವಧಿಗೆ 39.92 ಇಂಚು ಮಳೆ ದಾಖಲಾಗಿತ್ತು.

ಸೋಮವಾರಪೇಟೆ ತಾಲೂಕಿಗೆ ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ 75.11 ಇಂಚು ಮಳೆ ದಾಖಲಾಗಿದೆ. ಹಿಂದಿನ ಸಾಲಿನಲ್ಲಿ ಈ ಅವಧಿಗೆ 35.26 ಇಂಚು ಮಳೆಯಾಗಿತ್ತು.

ಅಲ್ಲಲ್ಲಿ ಮಳೆ: ಕಳೆದ 24 ಗಂಟೆಗಳಲ್ಲಿ ಕಾವೇರಿ ಉಗಮ ಸ್ಥಳ ತಲಕಾವೇರಿ ವ್ಯಾಪ್ತಿಯಲ್ಲಿ 4.01 ಇಂಚು ಮಳೆಯಾಗಿದೆ. ಭಾಗಮಂಡಲಕ್ಕೆ 2.28 ಇಂಚು ಮಳೆಯೊಂದಿಗೆ ಶಾಂತಳ್ಳಿ ಹೋಬಳಿಗೆ 3.54 ಇಂಚು ಮಳೆ ಸುರಿದಿದೆ. ವೀರಾಜಪೇಟೆ ಹಾಗೂ ಶ್ರೀಮಂಗಲ ವ್ಯಾಪ್ತಿಯಲ್ಲಿ ತಲಾ 1.09 ಇಂಚು ಮಳೆ ಬಿದ್ದಿದೆ.

ಜಿಲ್ಲಾ ಕೇಂದ್ರ ಮಡಿಕೇರಿಗೆ 2.44 ಇಂಚು, ಸಂಪಾಜೆ ವ್ಯಾಪ್ತಿಗೆ 2.28 ಇಂಚು, ನಾಪೋಕ್ಲು 0.92 ಇಂಚು ಮಳೆಯಾಗಿದೆ. ಸೋಮವಾರಪೇಟೆ 1.46 ಇಂಚು, ಶನಿವಾರಸಂತೆ 1.11 ಇಂಚು, ಕೊಡ್ಲಿಪೇಟೆ 0.78 ಇಂಚು, ಕುಶಾಲನಗರ 0.33 ಇಂಚು, ಸುಂಟಿಕೊಪ್ಪ 1.29 ಇಂಚು ಮಳೆಯಾಗಿದೆ.

ದಕ್ಷಿಣ ಕೊಡಗಿನ ವೀರಾಜಪೇಟೆ ಗ್ರಾಮೀಣ ಭಾಗಕ್ಕೆ ಸರಾಸರಿ 1 ಇಂಚು, ಪೊನ್ನಂಪೇಟೆ 0.37 ಇಂಚು, ಹುದಿಕೇರಿ 0.78 ಇಂಚು, ಬಾಳೆಲೆ 0.35 ಇಂಚು, ಅಮ್ಮತ್ತಿ 0.1 ಇಂಚು ಮಳೆಯಾಗಿದೆ.

ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಇಂದಿನ ನೀರಿನ ಪ್ರಮಾಣ 2857.09 ಅಡಿಯಿದ್ದು, ಜಲಾಶಯಕ್ಕೆ 11,777 ಕ್ಯೂಸೆಕ್ಸ್ ನೀರು ಬರುತ್ತಿದೆ. ಜಲಾಶಯದಿಂದ 11777 ಕ್ಯೂಸೆಕ್ಸ್ ನದಿಗೆ ಹಾಗೂ 750 ಕ್ಯೂಸೆಕ್ಸ್ ನಾಲೆಗೆ ಬಿಡಲಾಗಿದೆ. ಗರಿಷ್ಠ ನೀರಿನ ಮಟ್ಟ 2859 ಅಡಿಗಳಾಗಿವೆ.