ಸೋಮವಾರಪೇಟೆ, ಜು. 24: ತಾಲೂಕಿನ ಆಲೂರು ಸಿದ್ದಾಪುರದಲ್ಲಿ ತಾ.26 ರಂದು ನಡೆಯುವ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲಾ ಕನ್ನಡಾಭಿಮಾನಿಗಳು ಸಹಕರಿಸಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯóಕ್ಷ ಬಿ.ಎಸ್. ಲೋಕೇಶ್ ಸಾಗರ್ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 26 ರಂದು ನಡೆಯಲಿರುವ ಸಮ್ಮೇಳನಕ್ಕೆ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಿರುವದರೊಂದಿಗೆ ಪೂರ್ವ ಭಾವಿ ಸಭೆಗಳನ್ನು ನಡೆಸಲಾಗಿದೆ. ಅಲ್ಲದೇ ಸಮ್ಮೇಳನದ ಯಶಸ್ಸಿಗಾಗಿ ಸಕಲ ಸಿದ್ದತೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಜಲಕಾಳಪ್ಪ ಅವರು ಕನ್ನಡದ ತೇರನ್ನು ಎಳೆಯಲಿದ್ದಾರೆ. ಹಾನಗಲ್ಲು ಗ್ರಾಮದ ಕೃಷಿ ಕುಟುಂಬದಲ್ಲಿ ಬದುಕು ಸಾಗಿಸುತ್ತಿರುವ ಜಲಕಾಳಪ್ಪ ಸಾಹಿತ್ಯದಲ್ಲಿ ತನ್ನದೇ ಆದÀ ಕೊಡುಗೆಯನ್ನು ಸಲ್ಲಿಸಿದ್ದಾರೆ ಎಂದರು.

ಅಂದು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣವನ್ನು ತಹಶೀಲ್ದಾರ್ ಪಿ.ಎಸ್.ಮಹೇಶ್, ಪರಿಷತ್ತಿನ ಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್, ನಾಡಧ್ವಜಾರೋಹಣವನ್ನು ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ನೆರವೇರಿಸಲಿದ್ದಾರೆ ಎಂದು ಮಾಹಿತಿಯಿತ್ತರು.

ಬೆಳಿಗ್ಗೆ 8.15ಕ್ಕೆ ಸಮ್ಮೇಳನದ ವಿವಿಧ ದ್ವಾರಗಳ ಉದ್ಘಾಟನೆ, ಮಂಗಳವಾದ್ಯ, ಪೂರ್ಣಕುಂಭಗಳು, ವೈವಿಧ್ಯಮಯ ಕಲಾ ತಂಡಗಳು, ಸ್ತ್ರೀಶಕ್ತಿ ಸಂಘ, ಧರ್ಮಸ್ಥಳ ಸಂಘ, ಕನ್ನಡಪರ ಸಂಘ, ಶಾಲಾ-ಕಾಲೇಜು ವಿದ್ಯಾರ್ಥಿ ಸಮೂಹ, ಆಟೋ ಚಾಲಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಮ್ಮೇಳದ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

9 ಗಂಟೆಗೆ ನಡೆಯುವ ಮೆರವಣಿಗೆಯನ್ನು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಾಯಾದೇವಿ ಗಲಗಲಿ ಉದ್ಘಾಟಿಸುವರು. ಕ್ಯಾಪ್ಟನ್ ಸಿ.ಕೆ.ಶಿವರಾಮ್ ಸಭಾಂಗಣ ಮತ್ತು ಜಂಗಮರ ಶರಣೆ ಲಿಂಗೈಕ್ಯೆ ಶಾಂತಮ್ಮ ಪ್ರಧಾನ ವೇದಿಕೆ ಉದ್ಘಾಟನೆಯನ್ನು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮತ್ತು ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ನೆರವೇರಿಸಲಿದ್ದಾರೆ.

ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಲಿದ್ದು, ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ನಿಕಟಪೂರ್ವ ಸಮ್ಮೇಳನÀದ ಅಧ್ಯಕ್ಷ ಚಂದ್ರಶೇಖರ್ ಮಲ್ಲೋರಹಟ್ಟಿ, ನಿವೃತ್ತ ಮಾಹಿತಿ ಆಯುಕ್ತ ಜೆ.ಎಸ್. ವಿರೂಪಾಕ್ಷಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಬೋಜೇಗೌಡ, ಆಯನೂರು ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು

ಕವಯತ್ರಿ ಶ.ಗ. ನಯನತಾರ ಬರೆದಿರುವ ‘ಭಾವನಾತರಂಗ’ ಕವನ ಸಂಕಲನ, ಪ್ರೋ.ಮೋಹನ್ ಪಾಳೇಗಾರ್ ಬರೆದಿರುವ ‘ಜೀವ ಜಗತ್ತಿನ ನಿಗೂಢ ಚಲನವಲನ, ಪರಮಾಣು ವಿದ್ಯುತ್ ಕಾಂತೀಯ ಮೂಲಗಳು’ ಹಾಗೂ ಜಲಾ ಕಾಳಪ್ಪ ರಚಿಸಿದ ‘ಆಪ್ತ ಕಾವ್ಯ’ ಮತ್ತು ಶರ್ಮಿಳಾ ರಮೇಶ್‍ರವರ ‘ಅಂತರಂಗದ ಕನವರಿಕೆಗಳು’ ಕೃತಿಯನ್ನು ಮಾಜಿ ಸಚಿವ ಬಿ.ಎ. ಜೀವಿಜಯ ಬಿಡುಗಡೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಡಾ. ಪ್ರಭಾಕರ್‍ಶಿಶಿಲ ಭಾಗವಹಿಸಲಿ ದ್ದಾರೆ. ಮಧ್ಯಾಹ್ನ 1.30 ರಿಂದ ಕನ್ನಡ ಗೀತಗಾಯನ, 2.30 ರಿಂದ ಕೃಷಿ, ಶಿಕ್ಷಣ, ಕ್ರೀಡಾ ಕ್ಷೇತ್ರದ ಕುರಿತು ವಿಚಾರಗೋಷ್ಠಿ, ಸಂಜೆ 5 ರಿಂದ ಸಾಧಕರಿಗೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಿರಿಕೊಡ್ಲಿ ಮಠದ ಸದಾಶಿವಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಉಪನ್ಯಾಸಕ ಎಚ್.ಕೆ. ತಿಲಗಾರ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಪ್ರಮುಖರಾದ ಸಿ.ಕೆ. ಚಂದ್ರಶೇಖರ್, ಬಿ.ಎಂ.ರಾಘವಯ್ಯ ಸೇರಿದಂತೆ ಇತರರು ಭಾಗವಹಿಸಲಿ ದ್ದಾರೆ. ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ಲೋಕೇಶ್ ಸಾಗರ್ ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಎಸ್.ಎ. ಮುರಳೀಧರ್, ಮಾಧ್ಯಮ ಕಾರ್ಯದರ್ಶಿ ಅಶ್ವಥ್‍ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಆರ್. ಹರೀಶ್‍ಕುಮಾರ್, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಕೆ.ಎ. ಆದಮ್, ನಿಕಟಪೂರ್ವ ಅಧ್ಯಕ್ಷ ಹೆಚ್.ಜೆ. ಜವರಪ್ಪ ಉಪಸ್ಥಿತರಿದ್ದರು.