ನಾಪೆÇೀಕ್ಲು, ಜು. 24: ಕರ್ನಾಟಕ ರಾಜ್ಯ ಸರಕಾರದ ಆದೇಶದಂತೆ ಮಡಿಕೇರಿ ತಾಲೂಕು ಪಂಚಾಯಿತಿಯ ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಪೆÇೀಕ್ಲು, ಬೇತು, ಕೊಳಕೇರಿ ಗ್ರಾಮಕ್ಕೆ ಅಡಗಿರುವ ಮನೆಗಳ ಸರ್ವೆ ಕಾರ್ಯವನ್ನು ಕೈಗೊಳ್ಳುತ್ತಿದ್ದು, ಈ ಕಾರ್ಯಕ್ಕಾಗಿ ರಮ್ಯ, ಶಶಿಕುಮಾರ್, ಮತ್ತು ಸುಷ್ಮಾ ಎಂಬವರುಗಳನ್ನು ನೇಮಿಸಲಾಗಿದೆ. ಈ ಗ್ರಾಮ ವ್ಯಾಪ್ತಿಯ ಮನೆಗಳಿಗೆ ಸಿಬ್ಬಂದಿಗಳು ಬರುವಾಗ ವಿವರವಾದ ಮಾಹಿತಿಯನ್ನು ನೀಡಿ, ಮನೆ ನಂಬರಿನ ಫಲಕವನ್ನು ಅವರಿಂದ ಪಡೆದುಕೊಂಡು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.