ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ಬೆಳೆಸಿದ ಕೀರ್ತಿಗೆ ಪಾತ್ರರಾಗಿರುವ ನಿಷ್ಠಾವಂತ ರಾಜಕಾರಣಿ ಸಮಾಜ ಸೇವಕ ಸಂಕೇತ್‍ಪೂವಯ್ಯ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಪಕ್ಷದ ವರಿಷ್ಠರು ಅಂಗೀಕರಿಸಬಾರದು ಎಂದು ಜಿಲ್ಲಾ ಜೆಡಿಎಸ್‍ನ ಸಂಘಟನಾ ಕಾರ್ಯದರ್ಶಿ ಬಿ. ಎಂ. ಧರ್ಮಪ್ಪ ಆಗ್ರಹಿಸಿದ್ದಾರೆ. ಸಂಕೇತ್ ಪೂವಯ್ಯ ಅವರು ಪಕ್ಷದ ಸಾರಥ್ಯವನ್ನು ವಹಿಸಿಕೊಂಡ ಬಳಿಕ ಜಿಲ್ಲಾದ್ಯಂತ ಪಕ್ಷದ ಸಂಘಟನೆಯಾಗಿದ್ದು, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‍ಗೆ ದೊರೆತ ಮತಗಳನ್ನು ಗಮನಿಸುವಾಗ ತಿಳಿದು ಬರುತ್ತದೆ ಎಂದ ಧರ್ಮಪ್ಪ ಸಂಕೇತ್‍ಪೂವಯ್ಯ ರಹಿತ ಜೆಡಿಎಸ್‍ಗೆ ಜಿಲ್ಲೆಯಲ್ಲಿ ಭವಿಷ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಯಾವದೇ ಕಾರಣಕ್ಕೂ ಅವರ ರಾಜೀನಾಮೆಯನ್ನು ಅಂಗೀಕರಿಸಕೂಡದು ಎಂದು ಪಕ್ಷದ ವರಿಷ್ಠ ದೇವೇಗೌಡರಿಗೆ ಬರೆದ ಪತ್ರದಲ್ಲಿ ಧರ್ಮಪ್ಪ ವಿನಂತಿಸಿಕೊಂಡಿದ್ದಾರೆ.