ಭಾಗಮಂಡಲ, ಜು. 24: ಇಲ್ಲಿಗೆ ಸಮೀಪದ ಸಣ್ಣಪುಲಿಕೋಟು ಗ್ರಾಮದ ತಲೆಮಾನಿ ಎಂಬಲ್ಲಿ ಕಳೆದ ಒಂದು ವಾರದಿಂದ ಕಾಡಾನೆ ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡಿ ನಷ್ಟ ಸಂಭವಿಸಿದೆ. ಪ್ರತಿದಿನ ತೋಟಗಳಲ್ಲಿ ಆನೆ ಓಡಾಡುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗ್ರಾಮದ ಕುಯ್ಯಮುಡಿ ಜನಾರ್ಧನ ಎಂಬವರ ತೋಟದಲ್ಲಿ ತೆಂಗು, ಬಾಳೆ, ಕಾಫಿ ಫಸಲು ನಾಶ ಮಾಡಿರುವದಲ್ಲದೇ ಒಂದು ವಾರದಿಂದ ಸ್ಥಳದಲ್ಲೇ ಬೀಡುಬಿಟ್ಟಿದ್ದು, ರಸ್ತೆ ಬದಿಯಲ್ಲೇ ಓಡಾಡುತ್ತಿದೆ. ಇದರಿಂದ ಶಾಲಾ ಮಕ್ಕಳಿಗೆ. ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಕೂಡಲೇ ಆನೆಯನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಗ್ರಾಮಸ್ಥ ಕುಯ್ಯಮುಡಿ ಮನೋಜ್ ಒತ್ತಾಯಿಸಿದ್ದಾರೆ.