*ಗೋಣಿಕೊಪ್ಪಲು, ಜು. 26: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸಭೆ ಅಲ್ಲಿನ ಸಮುದಾಯ ಭವನದಲ್ಲಿ ಪಂಚಾಯಿತಿ ಅಧ್ಯಕ್ಷ ಹೆಚ್.ಇ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಪಿ.ಸಿ. ರಾಮು ಅವರ ಸಮ್ಮುಖದಲ್ಲಿ ತಾ. 27 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಮಜ್ಜಿಗೆಹಳ್ಳ ಫಾರಂ, ಕಾರೆಕಂಡಿ, ಬೊಂಬುಕಾಡು, ಚೀಣಿಹಡ್ಲು ಹಾಡಿಯ ಮೂಲಭೂತ ಸೌಕರ್ಯದ ಅರಣ್ಯ ಹಕ್ಕು ಸಮಿತಿಯ ವಿಶೇಷ ಗ್ರಾಮ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.