ಮಡಿಕೇರಿ, ಜು. 25: ಎಲ್ಲಿಯೂ ಇಲ್ಲದ ಶೌಚಾಲಯಗಳು - ಇದು ಮಡಿಕೇರಿಯ ಪ್ರಖ್ಯಾತ ಸರಕಾರಿ ಪದವಿ ಪೂರ್ವ ಕಾಲೇಜಿನ ಇಂದಿನ ದುರಂತ ಪರಿಸ್ಥಿತಿ!

ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಸೇರಿದಂತೆ ಇನ್ನೂ ಹಲವಾರು ಗಣ್ಯರಿಗೆ ವಿದ್ಯೆ ಒದಗಿಸಿದ ಈ ಜ್ಞಾನ ದೇಗುಲ ಇಂದು ದನದÀ ಕೊಟ್ಟಿಗೆಗಿಂತಲೂ ಹೀನಾಯ ಸ್ಥಿತಿಯಲ್ಲಿದೆ. “ನಾವು ಸೋರುವ ಛಾವಣಿಯಡಿಯಲ್ಲಿ, ನೀರಲ್ಲಿ ಹರಿಯುತ್ತಿರುವ ಒದ್ದೆ ನೆಲದ ಕೊಠಡಿಗಳಲ್ಲಿ ಕುಳಿತು ಪಾಠ ಕಲಿಯುತ್ತಿದ್ದೇವೆ. ಅಲ್ಲದೆ, ಕಾಲೇಜಿನ ಆವರಣದಲ್ಲಿ ಅಲ್ಲಲ್ಲಿ ಜಾನುವಾರುಗಳು ಮೇಯುತ್ತಿದ್ದು ಕೆಲವೊಮ್ಮೆ ಕಾಲೇಜಿನ ಕೊಠಡಿಗಳು ಗೋಮಯದ ವಾಸನೆಯಿಂದ ತುಂಬಿರುತ್ತದೆ,” ಎಂದು 2ನೇ ಪದವಿ ಪೂರ್ವ ವಿದ್ಯಾಥಿರ್ü ಜಯಂತ್, ವಿವರಿಸುತ್ತಾನೆ. ವಿಸ್ತಾರವಾದ ಪ್ರದೇಶದಲ್ಲಿ ಈ ಕಾಲೇಜು ಕಟ್ಟಡ ನೆಲೆ ನಿಂತಿದ್ದರೂ ಸೂಕ್ತ ಮೂಲಭೂತ ಸೌಕರ್ಯವಿಲ್ಲದೆ ಕಾಲೇಜು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಪಾಚಿಗಟ್ಟಿದ ತಣ್ಣನೆಯ ಗೋಡೆಗಳು ಹಾಗೂ ಪಟಪಟ ಸೋರುತ್ತಿರುವ ಛಾವಣಿಯಡಿಯಲ್ಲಿ ವಿದ್ಯಾರ್ಥಿಗಳು, ಕೆಲವೊಮ್ಮೆ ಕಗ್ಗತ್ತಲಿನಲ್ಲಿ, ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಸುಮಾರು 600 ಮಂದಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ 2017 ರಲ್ಲಿ ಪೂರ್ಣಗೊಂಡಿರುವ ಹೊಸ ಕಟ್ಟಡದಲ್ಲಿ ಪಾಠಗಳು ನಡೆಯುತ್ತಿವೆ.

(ಮೊದಲ ಪುಟದಿಂದ) ಈ ಕಟ್ಟಡದ ದುಸ್ಥಿತಿ ಉಳಿದ ಪುರಾತನ ಕಾಲದ ಕಟ್ಟಡಗಳಿಗಿಂತ ಕಡೆಯದ್ದಾಗಿದೆ. ಪಾಠದ ಕೊಠಡಿಗಳು ಕೊಚ್ಚೆ ತುಂಬಿದ ಆಟದÀ ಮೈದಾನಗಳÀಂತಾಗಿವೆ.

ಇನ್ನು, ಪದವಿ ಪೂರ್ವ ಕಾಲೇಜಿಗೆ ಸರಿಯಾದ ಕೊಠಡಿಗಳಿಲ್ಲ. ಸನಿಹÀದಲ್ಲಿರುವ ಕೊಠಡಿಗಳನ್ನು ಪ್ರಥಮ ದರ್ಜೆ ಪದವಿ ಪೂರ್ವ ಕಾಲೇಜಿನ ಮಕ್ಕಳಿಗೂ ಮೀಸಲಿಡಲಾಗಿದೆ. “2007 ರಲ್ಲಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿಯೇ ಪ್ರಥಮ ದರ್ಜೆ ಕಾಲೇಜು ಪ್ರಾರಂಭವಾಯಿತು. ಇಲ್ಲಿಯವರೆಗೂ ಈ ಪ್ರಥಮ ದರ್ಜೆ ಕಾಲೇಜಿಗೆ ಸೂಕ್ತವಾದ ಬದಲೀ ಕಟ್ಟಡವನ್ನು ಒದಗಿಸಿಲ್ಲ.. ಕಾಲೇಜಿಗೆ ಅಗತ್ಯವಾದ ನಿವೇಶನವಾಗಲಿ, ಸದ್ಯಕ್ಕೆ ಅಗತ್ಯ ಸಮರ್ಪಕ ಕೊಠಡಿಗಳ ಲಭ್ಯತೆಯಾಗಲಿ ಇಲ್ಲದಿದ್ದು ಈ ಕಾರಣಕ್ಕಾಗಿ ಪದವಿ ಪೂರ್ವ ಕಾಲೇಜಿನ ಕೆಲವು ಕೊಠಡಿಗಳನ್ನು ಪ್ರಥಮ ದರ್ಜೆ ಕಾಲೇಜಿನ ಆಡಳಿತಕ್ಕೆ ಒಪ್ಪಿಸಲಾಗಿದೆ,” ಎಂದು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಪಿ.ಆರ್. ಹೇಳುತ್ತಾರೆ.

ಪ್ರಥಮ ದರ್ಜೆ ಕಾಲೇಜಿನ ಸುಮಾರು 310 ವಿದಾರ್ಥಿಗಳಿಗೆ ಹಳೆಯ ಕಟ್ಟಡಗಳಲ್ಲಿ ಪಾಠ ನಡೆಸಲಾಗುತ್ತಿದ್ದು ಈ ಕಟ್ಟಡಗಳು ಸೋರುತ್ತಿವೆಯಲ್ಲದೆ ಇವುಗಳಲ್ಲಿ ವಿದ್ಯುತ್ ಸೌಲಭ್ಯವೂ ಇಲ್ಲ. ವಿದ್ಯಾರ್ಥಿಗಳು ಸೋರುವ ಕಗ್ಗತ್ತಲಿನ ಕೊಠಡಿಗಳಲ್ಲಿ ಕುಳಿತು ವಿದ್ಯಾಭ್ಯಾಸ ಮಾಡುತ್ತಿದ್ದರೆ, ಕಾಲೇಜಿನ ಸಿಬ್ಬಂದಿ ಟಾರ್ಪಲ್‍ನಿಂದ ಮುಚ್ಚಿದ ಛಾವಣಿಂ iÀುಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶು ಪಾಲೆ ಚೈತ್ರಾರವರ ಕಛೇರಿಯೂ ಸಂಪೂರ್ಣ ಸೋರುತ್ತಿದೆ.

ಈ ಎಲ್ಲ ಸಂಕಷ್ಟಗಳೊಂದಿಗೆ, 900 ಕ್ಕೂ ಹೆಚ್ಚು ಮಂದಿ ಇರುವ ಇಲ್ಲಿನ ವಿದ್ಯಾರ್ಥಿಗಳಿಗೆ ಸರಿಯಾದ ಶೌಚಾಲಯವಿಲ್ಲ. ಪದವಿ ಪೂರ್ವ ಕಾಲೇಜಿನ ಕೊಠಡಿಯ ಹಿಂಬದಿಯಲ್ಲಿ ಪುಟ್ಟ ಶೌಚಾಲಯವೊಂದು ಸುಮಾರು 2 ವರ್ಷಗಳಿಂದ ಪೂರ್ಣ ಕಾಮಗಾರಿಯಾಗದೆ ಅನುಪಯುಕ್ತ ಸ್ಥಿತಿಯಲ್ಲಿದೆ. ಪ್ರಥಮ ದರ್ಜೆ ಕಾಲೇಜಿನ ಮಕ್ಕಳಿಗೆಂದು ಮೀಸಲಿಟ್ಟಿರುವ ಶೌಚಾಲಯ ತೀರಾ ಕೊಳಕು ಸ್ಥಿತಿಯಲ್ಲಿದೆ. ಗಂಡು ಮಕ್ಕಳು ಹೆಚ್ಚಾಗಿ ಕಾಡಿನ ಬದಿಯಲ್ಲಿ ತಮ್ಮ ಜಲಬಾಧೆ ತೀರಿಸಿಕೊಂಡರೆ, ಹೆಣ್ಣು ಮಕ್ಕಳು ಎಫ್.ಎಂ.ಕೆ.ಎಂ.ಸಿ ಸಭಾಂಗಣದ ಶೌಚಾಲಯವನ್ನು ಉಪಯೋಗಿಸುತ್ತಾರೆ. ಈ ಸಭಾಂಗಣದ ಬಾಗಿಲು ಮಧ್ಯಾಹ್ನ ನಂತರ ಮುಚ್ಚಲ್ಪಡಲಿದ್ದು ಆ ಬಳಿಕÀ ವಿದ್ಯಾರ್ಥಿನಿಯರು ಶೌಚಕ್ಕೇ ತೆರಳದೆ, ಕೆಲವೊಮ್ಮೆ ಮಡಿಕೇರಿಯ ಸರಕಾರಿ ಬಸ್ ನಿಲ್ದಾಣಕ್ಕೆ ಶೌಚಾಲಯ ಉಪಯೋಗಿಸಲು ತೆರಳುತ್ತಾರೆ. ಈ ದುಸ್ಥಿತಿಯ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅÀವರ ಗಮನಕ್ಕೆ ತಂದಾಗ, “ನಾನು ಮುಖ್ಯಮಂತ್ರಿಯವರಿಗೆ ಕಾಲೇಜಿನ ಅಭಿವೃದ್ದಿಗೆಂದು ಹಣ ಬಿಡುಗಡೆಮಾಡಲು ಈಗಾಗಲೇ ಮನವಿ ಸಲ್ಲಿಸಿದ್ದೇನೆ. ಹೊಸ ಕೊಠಡಿಯ ದುಸ್ಥಿತಿ ಬಗ್ಗೆ ನನಗೆ ತಿಳಿದಿರಲಿಲ್ಲ. ನಾನು ಈ ಶುಕ್ರವಾರ ಕಾಲೇಜಿಗೆ ಖುದ್ದಾಗಿ ತೆರಳಿ, ಖುದ್ದು ಮಾಹಿತಿ ಪಡೆದು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ,” ಎಂದು ಭರವಸೆ ನೀಡಿದರು. 18ನೇ ಶತಮಾನದಲ್ಲಿ ಪ್ರಾರಂಭಗೊಂಡ ಈ ಕಾಲೇಜು, 7 ಬ್ರಿಟೀಷ್ ಪ್ರಾಂಶುಪಾಲರಿಂದ ನಡೆಸಲ್ಪಟ್ಟು, ಫೀಲ್ಡ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಅವರÀಂತಹ ಹಲವಾರು ಗಣ್ಯರಿಗೆ ವಿದ್ಯಾದೇಗುಲವಾಗಿದ್ದರೂ ಇತ್ತೀಚೆಗಿನ ವರ್ಷಗಳಲ್ಲಿ ಕಾಲೇಜು ನಿರ್ಲಕ್ಷ್ಯಕ್ಕೆ ಒಳಗಾಗಿ ಕಳೆಗುಂದುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ಸಹಾಯಕ್ಕಾಗಿ ಕೈಯೊಡ್ಡುತ್ತಿದೆ.