‘ಕಾವೇರಿ ಹುಟ್ಟಿದ ಈ ನಮ್ಮ ಜಿಲ್ಲೆ, ಹೇಳಿಕೊಳ್ಳಲು ನಮಗೆ ಭಾರೀ ಹೆಮ್ಮೆ.., ಈ ಸೌಂದರ್ಯ ಸಿರಿಯ ನೀವೆಲ್ಲಾ ಬಂದು ನೋಡಿ ಒಮ್ಮೆ..,’ - ಹೀಗೆ ಗರ್ವದಿಂದ ಹೇಳಿಕೊಳ್ಳುವ ನಾವು ಕಾವೇರಿಯನ್ನು ಕಲುಷಿತಗೊಳಿಸುತ್ತಿದ್ದೇವೆ, ನೆಲ ಜಲ ಪ್ರಕೃತಿ ಸಂಪತ್ತಿನ ರಕ್ಷಣೆಯೊಂದಿಗೆ ಜೀವನದಿಯನ್ನು ಸಂರಕ್ಷಿಸೋಣ ಎಂಬ ಮನವಿಯೊಂದಿಗೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಜಲಾ ಕಾಳಪ್ಪ ಅವರು ಮಂಡಿಸಿದ ಮುದ್ರಿತ ಅಧ್ಯಕ್ಷೀಯ ಭಾಷಣದಲ್ಲಿ ಕೊಡಗಿನ ಬಗ್ಗೆ ಕಾಳಜಿ ಕಂಡುಬಂತು.