ನಾಪೆÇೀಕ್ಲು, ಜು. 26: ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು ರೂ. 26,82,672 ನಿವ್ವಳ ಲಾಭಗಳಿಸಿದೆ ಎಂದು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ನೂರಂಬಡ ಎಸ್, ಉದಯ ಶಂಕರ್ ಹೇಳಿದರು.
ಸಂಘದ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘದಲ್ಲಿ 2425 ಸದಸ್ಯರಿದ್ದಾರೆ. ಪ್ರಸಕ್ತ 97.57 ಕೋಟಿ ಸದಸ್ಯರ ಪಾಲು ಬಂಡವಾಳ ಇದ್ದು 22.87 ಕೋಟಿ ಠೇವಣಿಯನ್ನು ಹೊಂದಿದೆ. ಸಂಘದ ಸದಸ್ಯರಿಗೆ ರೂ. 21.10 ಕೋಟಿ ಸಾಲವಾಗಿ ನೀಡಿದೆ ಎಂದರು. ಶೇ. 99 ಸಾಲ ವಸೂಲಿ ಮಾಡಿ ಸಂಘವು ‘ಎ’ ಶ್ರೇಣಿಯನ್ನು ಹೊಂದಿದೆ ಎಂದು ತಿಳಿಸಿ ಸರಕಾರದ ಸಾಲ ಮನ್ನಾ ಯೋಜನೆಯಲ್ಲಿ ಈ ಸಂಘದ 563 ಮಂದಿಗೆ ಇದರ ಪ್ರಯೋಜನವಾಗಿದ್ದು ರೂ. 2,61 ಕೋಟಿ ಮನ್ನಾ ಆಗಿರುವದಾಗಿ ತಿಳಿಸಿದರು.
ಪ್ರಸÀಕ್ತ ಸಂಘವು 105 ಕೋಟಿ ವ್ಯವಹಾರ ನಡೆಸುತ್ತಿದ್ದು, ರೂ. 30 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದ ಅವರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಂಘದ ನೂತನ ಕಟ್ಟಡದ ಕಾಮಗಾರಿಯು ಶೇ. 90 ರಷ್ಟು ಮುಗಿದಿದೆ. ಕೆಲಸ ಪೂರ್ಣಗೊಂಡ ಬಳಿಕ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು. ಕಟ್ಟಡದ ಕಾಮಗಾರಿಗಾಗಿ ಸದಸ್ಯರುಗಳನ್ನು ಡಿವಿಡೆಂಡ್ ಹಣ ಬಿಡುವಂತೆ ಕೇಳಿಕೊಂಡ ಮೇರೆ ಕಳೆದ ಸಾಲಿನ ಡಿವಿಡೆಂಡ್ ಹಣ 6.71 ಲಕ್ಷ ಹಣವನ್ನು ನೂತನ ಕಟ್ಟಡದ ಕಾಮಗಾರಿಗೆ ಬಳಸಲಾಗಿದೆ. ಕ್ಷೇಮನಿಧಿಯಿಂದ 45 ಲಕ್ಷ, ಡಿ.ಸಿ.ಸಿ. ಬ್ಯಾಂಕ್ನಿಂದ 30 ಲಕ್ಷ ಮತ್ತು ಕಟ್ಟಡದ ನಿಧಿಯಿಂದ 15 ಲಕ್ಷ ರೂ ಗಳನ್ನು ನೂತನ ಕಟ್ಟಡಕ್ಕೆ ಬಳಸಿಕೊಳ್ಳಲಾಗಿದೆ ಎಂದರು.
ಸಂಘದಲ್ಲಿ ಸದಸ್ಯರಿಗೆ ಕೃಷಿ ಸಾಲ ಮಧ್ಯಮಾವಧಿ ಕೃಷಿ ಸಾಲದಲ್ಲಿ ಕೆರೆ ಸಾಲ, ಗೋದಾಮು ಸಾಲ, ಕಾಂಕ್ರೀಟ್ ಕಣ ಸಾಲ, ಕೃಷಿ ಯಂತ್ರೋಪಕರಣ ಸಾಲ, ನೀಡಲಾಗುವದು ಕೃಷಿಯೇತರ ಸಾಲದಲ್ಲಿ ವಾಹನ ಸಾಲ, ಜಾಮೀನು ಸಾಲ, ಆಭರಣ ಸಾಲ, ಸ್ವಸಹಾಯ ಗುಂಪುಗಳು ಮತ್ತು ಜಂಟಿ ಬಾಧ್ಯತಾ ಗುಂಪುಗಳಿಗೆ ಸಾಲ ನೀಡಲಾಗುವದು. ಯುಪಿಎಸ್ ಮತ್ತು ಸೋಲಾರ್ ಸಾಲ, ಮರಣ ನಿಧಿ, ಮಾರಾಟ ಮಳಿಗೆ, ಅಕ್ಕಿ ಗಿರಣಿ ಮತ್ತು ಟ್ರ್ಯಾಕ್ಟರ್, ವಿಮೆ, ಬೆಳೆವಿಮೆ, ವಾಣಿಜ್ಯ ಮಳಿಗೆ, ಸೇಫ್ ಲಾಕರ್, ಇ ಸ್ಟಾಂಪ್ ಸೌಲಭ್ಯವನ್ನು ಹೊಂದಿರುತ್ತದೆ ಎಂದರು. ಅಲ್ಲದೆ ಸಂಘÀದ ಸದಸ್ಯರ ಮಕ್ಕಳು ವಿದ್ಯಾಭ್ಯಾಸದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು
ನೂತನ ಮಳಿಗೆಯನ್ನು ತಾ. 29 ರಂದು ಉದ್ಘಾಟಿಸಲು ಈಗಾಗಲೇ ತೀರ್ಮಾನಿಸಲಾಗಿತ್ತು. ಮಳೆಯ ಕಾರಣದಿಂದ ಉದ್ಘಾಟನಾ ಕಾರ್ಯವನ್ನು ಮುಂದೂಡಲು ತೀರ್ಮಾನಿಸಲಾಗಿದೆ; ಮುಂದಿನ ತಿಂಗಳು 18 ರಂದು ಚುನಾವಣೆ ಇರುವದರಿಂದ ಆದಷ್ಟು ಬೇಗ ಕಾಮಗಾರಿ ಮುಗಿಸಿ ನಂತರ ಉದ್ಘಾಟನೆ ದಿನಾಂಕವನ್ನು ತಿಳಿಸಲಾಗುವದು ಎಂದ ಅವರು ತಾ. 29 ರಂದು ನಾಪೆÇೀಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಕಾಂಡಂಡ ಜಯ ಕರುಂಬಯ್ಯ, ಕೇಲೇಟಿರ ಅರುಣ ಬೇಬ, ಕೇಟೋಳಿರ ಹರೀಶ್ ಪೂವಯ್ಯ, ಅರೆಯಡ ಅಶೋಕ, ಬೊಪ್ಪೇರ ಕಾವೇರಪ್ಪ, ಹೆಚ್.ಎ. ಬೊಳ್ಳು, ಕೇಲೇಟಿರ ಮಾಲ ಬೋಪಯ್ಯ, ಬಿದ್ದಾಟಂಡ ರಾಧ ಗಣಪತಿ, ಕುಂಡ್ಯೋಳಂಡ ಕವಿತ ಮುತ್ತಣ್ಣ, ಕಾರ್ಯನಿರ್ವಹಣಾಧಿಕಾರಿ ಶಿವಚಾಳಿಯಂಡ ವಿಜು ಪೂಣಚ್ಚ, ಇದ್ದರು.