ಮಡಿಕೇರಿ, ಜು. 26: 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಅನೇಕ ಕಡೆ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿರುವ ಬೆನ್ನಲ್ಲೇ ತಾ. 27 ರಂದು (ಇಂದು) ಸಂಭವಿಸಲಿರುವ ಕೇತುಗ್ರಸ್ತ ಚಂದ್ರಗ್ರಹಣವು ಅಲ್ಲಿನ ನಿವಾಸಿಗಳಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ. ಇಂದು ಗ್ರಾಮಕ್ಕೆ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ ಭೇಟಿ ನೀಡಿ ಪರಿಶೀಲಿಸಿದರು.ಈ ವೇಳೆ ಅಲ್ಲಿನ ಗ್ರಾ.ಪಂ. ಸದಸ್ಯ ಧನಂಜಯ್ ಹಾಗೂ ಇತರ ನಿವಾಸಿಗಳು ಶಾಸಕರೊಂದಿಗೆ ಈ ಬಗ್ಗೆ ಆತಂಕ ತೋಡಿಕೊಂಡರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ನಿನ್ನೆ ಭೇಟಿ ನೀಡಿದ್ದು, ಯಾರೊಬ್ಬರಿಗೂ ಸುಳಿವು ನೀಡಿರಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.