ಮಡಿಕೇರಿ, ಜು. 25: ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಶಾಂತೆಯಂಡ ರವಿಕುಶಾಲಪ್ಪ ಅವರ ತಾಯಿ ಜಾಜಿ ಚೋಂದವ್ವ (83) ಅವರು ತಾ. 25 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 26 ರಂದು (ಇಂದು) ಮಧ್ಯಾಹ್ನ ಸ್ವಗ್ರಾಮ ಮುಕ್ಕೋಡ್ಲು ಗ್ರಾಮದಲ್ಲಿ ನಡೆಯಲಿದೆ. ಮೃತರು ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.