ನಾಪೆÇೀಕ್ಲು, ಜು. 26: ಕಕ್ಕಬ್ಬೆ ಸಮೀಪದ ಅಮ್ಮಂಗೇರಿಯಲ್ಲಿರುವ ಶ್ರೀ ಪನ್ನಂಗಾಲತಮ್ಮೆ ದೇವಿಯ ಆದಿಸ್ಥಳದ ದೇವರ ಕಟ್ಟೆಯಲ್ಲಿದ್ದ ಐತಿಹಾಸಿಕ ಮಾವಿನ ಮರದ ಅರ್ಧ ಭಾಗ ಧರೆಗೆ ಉರುಳಿ ಬಿದ್ದಿದೆ.
ಸಮೀಪದಲ್ಲಿಯೇ ದೇವಿಯ ಆರಾಧಕರಾದ ಕಣಿಯರ ಕುಟುಂಬಸ್ಥರ ಐನ್‍ಮನೆ ಮತ್ತು ಮನೆಗಳಿದ್ದು, ಮರವು ಗದ್ದೆ ಬದಿಗೆ ಉರುಳಿ ಬಿದ್ದ ಕಾರಣ ಯಾವದೇ ಅನಾಹುತ ಸಂಭವಿಸಿಲ್ಲ ಎಂದು ಕಣಿಯರ ಕುಟುಂಬದ ಹಿರಿಯರಾದ ನಾಣಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.