ಮಡಿಕೇರಿ, 25: ಮಡಿಕೇರಿ - ಮಂಗಳೂರು ರಾಜ್ಯ ಹೆದ್ದಾರಿ ಮತ್ತೆ ಕುಸಿದಿದ್ದು, ಸಂಪರ್ಕ ಕಡಿತಗೊಳ್ಳುವ ಆತಂಕ ಸೃಷ್ಟಿಯಾಗಿದೆ.ರಾಜ್ಯ ಹೆದ್ದಾರಿಯ ಮಡಿಕೇರಿಯಿಂದ ಮೂರು ಕಿ.ಮೀ. ಅಂತರದಲ್ಲಿ ಇತ್ತೀಚೆಗೆ ಬಿರುಕು ಕಾಣಿಸಿಕೊಂಡಿತ್ತು. ಬಿರುಕು ಕಾಣಿಸಿಕೊಂಡ ಸ್ಥಳದಲ್ಲಿ ಸಂಚಾರ ನಿಷೇದಿಸಿ, ಬಿರುಕುಗಳಿಗೆ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಸಿಮೆಂಟ್ ತೇಪೆ ಹಾಕಲಾಗಿತ್ತು. ಇದೀಗ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾಟಕೇರಿ ಬಳಿ ಕೂಡ ರಸ್ತೆ ಕುಸಿದಿದೆ. ರಸ್ತೆಯ ಅರ್ಧ ಭಾಗದಷ್ಟು ಕುಸಿದಿದ್ದು, ಒಂದು ವೇಳೆ ಸಂಪೂರ್ಣ ಜಾರಿದರೆ ರಸ್ತೆಯಲ್ಲಿ ವಾಹನ ಸಂಚಾರ ಕಡಿತಗೊಳ್ಳುವ ಸಾಧ್ಯತೆಯಿದೆ. ಭಾರೀ ವಾಹನಗಳ ಎಗ್ಗಿಲ್ಲದ
(ಮೊದಲ ಪುಟದಿಂದ) ಸಂಚಾರದಿಂದಾಗಿ ಈ ರೀತಿಯ ಅನಾಹುತಗಳಾಗುತ್ತಿದ್ದು, ರಸ್ತೆ ಕುಸಿದರೆ ಮಂಗಳೂರು ಕಡೆಗೆ ಪರ್ಯಾಯ ರಸ್ತೆ ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ.
- ಮಾಹಿತಿ : ಲಿಖಿನ್ ಕೆ.ಆರ್., ಚಿತ್ರ : ಲಕ್ಷ್ಮೀಶ್