ವೀರಾಜಪೇಟೆ, ಜು. 26: ಮಾಕುಟ್ಟ ರಸ್ತೆಯನ್ನು ಖುದ್ದಾಗಿ ಪರಿಶೀಲನೆ ಮಾಡಲು ಮಂಗಳವಾರ ಭೂವಿಜ್ಞಾನಿಗಳ ತಂಡ ಆಗಮಿಸಿತ್ತು. ಈ ತಂಡವು ವೀರಾಜಪೇಟೆಯ ತಹಶೀಲ್ದಾರ್ ಒಡಗೂಡಿ ಮಾಕುಟ್ಟ ರಸ್ತೆಯುದ್ದಕ್ಕೂ ಸಂಚರಿಸಿ ಪರಿಶೀಲನೆ ನಡೆಸಿತು. ಕೇಂದ್ರ ಗಣಿ ಸಚಿವಾಲಯದ ಭಾರತೀಯ ಭೂ ವೈಜ್ಞಾನಿಕ ಸಮೀಕ್ಷಾ ನಿರ್ದೇಶಕ ಕೆ.ವಿ. ಮಾರುತಿ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ ತಂಡ ಮಣ್ಣನ್ನು ವೈಜ್ಞಾನಿಕ ಅಧ್ಯಯನಕ್ಕಾಗಿ ಕೊಂಡೊಯ್ದಿದೆ.