ಮೂರ್ನಾಡು, ಜು. 26: ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಯೋರ್ವರಿಗೆ ಧನ ಸಹಾಯ ನೀಡಲಾಯಿತು. ಐಕೊಳ ಗ್ರಾಮದ ನಿವಾಸಿ ಪೊನ್ನಪ್ಪ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಲಯನ್ಸ್ ಕ್ಲಬ್ ವತಿಯಿಂದ ಡಯಾಲಿಸಿಸ್ ಚಿಕಿತ್ಸೆಗಾಗಿ ಹತ್ತು ಸಾವಿರ ರೂಪಾಯಿಯನ್ನು ಕ್ಲಬ್ ಅಧ್ಯಕ್ಷ ಬಡುವಂಡ ಗಣಪತಿ ಬೋಪಣ್ಣ ವಿತರಿಸಿದರು. ಈ ಸಂದರ್ಭ ಕಾರ್ಯದರ್ಶಿ ಮಾಳೇಟಿರ ನವೀನ್ ಕಾರ್ಯಪ್ಪ, ಖಜಾಂಚಿ ಬಡುವಂಡ ಸುಬ್ರಮಣಿ, ಸದಸ್ಯರಾದ ಬಡುವಂಡ ಅರುಣ್ ಅಪ್ಪಚ್ಚು, ಪಳಂಗಂಡ ಮುದ್ದಪ್ಪ, ಅಮ್ಮಾಟಂಡ ಚಂಗಪ್ಪ, ಮುಕ್ಕಾಟೀರ ಕಾರ್ಯಪ್ಪ ಇದ್ದರು.