ಮಡಿಕೇರಿ, ಜು. 27: ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್ ವತಿಯಿಂದ ತಾ. 30 ರಂದು ಪತ್ರಿಕಾ ದಿನಾಚರಣೆಯನ್ನು ಅಚರಿಸ ಲಾಗುವದು ಎಂದು ಅಧ್ಯಕ್ಷ ಹೆಚ್.ಎಂ. ರಘು ತಿಳಿಸಿದ್ದಾರೆ.
ಇಲ್ಲಿನ ವಿವೇಕಾನಂದ ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯುವ ಕಾರ್ಯಕ್ರಮ ವನ್ನು ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪ್ರೆಸ್ ಕ್ಲಬ್ ಟ್ರಸ್ಟ್ ಅದ್ಯಕ್ಷ ಹೆಚ್. ಎಂ. ರಘು ವಹಿಸ ಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಭಾಗವಹಿ ಸಲಿದ್ದು, ವಿಶೇಷ ಅಹ್ವಾನಿತರಾಗಿ ಸಮಾಜ ಸೇವಕ ಸಂಕೇತ್ ಪೂವಯ್ಯ, ಸೋಮವಾರಪೇಟೆ ಪೊಲೀಸ್ ಉಪ ಅಧೀಕ್ಷಕ ಮುರಳೀಧÀರ್ ಪಾಲ್ಗೊಳ್ಳ ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸೋಮವಾರಪೇಟೆ ತಾಲೂಕು ಪಂಚಾಯಿತಿ ಅದ್ಯಕೆÀ್ಷ ಪುಷ್ಪಾ ರಾಜೇಶ್. ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ಹಿರಿಯ ವಕೀಲ ಹೆಚ್. ಎಸ್. ಚಂದ್ರಮೌಳಿ. ಐ.ಎನ್.ಟಿ. ಯು.ಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೆ.ವಿ. ಹರ್ಷಿತ್, ಪತ್ರಿಕಾ ರಂಗದಲ್ಲಿ ಎಂ.ಎ. ಅಜೀಜ್, ಅರಣ್ಯ ಕ್ಷೇತ್ರದಲ್ಲಿ ಕೆ.ಪಿ. ರಂಜನ್, ಆರೋಗ್ಯ ಇಲಾಖೆಯಲ್ಲಿ ಬಿ.ಡಿ. ಗೌರಮ್ಮ, ಶಿಕ್ಷಣ ಕ್ಷೇತ್ರದಲ್ಲಿ ಹಿಲ್ಡಾ ಪಿಂಟೋ, ಸಮಾಜ ಸೇವೆಯಲ್ಲಿ ಎಂ. ಮೋಹನ್ ಕುಮಾರ್‍ಗೌಡ, ಪೊಲೀಸ್ ಇಲಾಖೆಯಲ್ಲಿ ಆಶಾ ಸುರೇಶ್, ಸಾಹಿತ್ಯ ಕ್ಷೇತ್ರದಲ್ಲಿ ಹಾ.ತಿ. ಜಯಪ್ರಕಾಶ್ ಇವರುಗಳÀನ್ನು ಸನ್ಮಾನಿಸಲಾಗುವದು ಎಂದು ರಘು ತಿಳಿಸಿದ್ದಾರೆ.