ಹೊಳೆಗೆ ಮರದ ಪಾಲ: ಕೆ. ನಿಡುಗಣೆ ಬಳಿ ಅಬ್ಬಿ ಹೊಳೆಗೆ ಮರದ ಪಾಲ ನಿರ್ಮಾಣ ಮಾಡಲಾಗಿದೆ. ಈ ಹೊಳೆಗೆ ಸದೃಢವಾದ ಸೇತುವೆ ನಿರ್ಮಾಣ ಮಾಡಿದರೆ, ಕೆ. ನಿಡುಗಣೆ, ಗಾಳಿಬೀಡು ಸಂಪರ್ಕ ರಸ್ತೆ ಮತ್ತು ಅಬ್ಬಿಫಾಲ್ಸ್ಗೆ ಅತೀ ಹತ್ತಿರದ ರಸ್ತೆಯಾಗಲಿದೆ. ವಾಹನ ಸಂಚಾರಕ್ಕೆ ಉಪಯುಕ್ತ ಆಗುತ್ತದೆ.
-ಸುಕುಮಾರ್ಹಳ್ಳಕೊಳ್ಳದ ರಸ್ತೆ: ಪಾರಾಣೆಯಿಂದ ಬಲಮುರಿ ಹಳೆ ಸೇತುವೆ ಹಾಗೂ ನಾಪೋಕ್ಲುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ 5-6 ಶಾಲಾ ಬಸ್ಗಳು ಸಂಚರಿಸುತ್ತಿದ್ದು, ಸಂಚಾರ ದುಃಸ್ತರವಾಗಿದೆ. ಸಂಬಂಧಿಸಿದವರು ಗಮನಿಸಿ.
-ಸೃಜನ್
ರಸ್ತೆ ಮಧ್ಯೆ ಹೊಂಡ : ಕೊಳಕೇರಿ ಗ್ರಾಮದ ಬೊಮ್ಮಂಜಿಕೇರಿ ರಸ್ತೆ ಮಧ್ಯೆ ಭಾರೀ ಗಾತ್ರದ ಹೊಂಡವಾಗಿದ್ದು, ವಾಹನ ಸವಾರರಿಗೆ ಯಮ ಕಂಟಕವಾಗಿದೆ.
- ಪುಲ್ಲೇರ ದಾದ ಭೀಮಯ್ಯ