ಸೋಮವಾರಪೇಟೆ, ಜು. 27: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಲೂರುಸಿದ್ದಾಪುರದಲ್ಲಿ ಆಯೋಜಿಸಲಾಗಿದ್ದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಸಾಹಿತ್ಯ ಕ್ಷೇತ್ರದಿಂದ ಫ್ಯಾನ್ಸಿ ಮುತ್ತಣ್ಣ, ಅನುವಾದ ಸಾಹಿತ್ಯ- ಕೆ.ಕೆ. ಗಂಗಾಧರ್, ಕೃಷಿ ಯಂತ್ರ ಸಂಶೋಧನೆ- ಎಂ.ಡಿ. ಮೋಹನ್, ಚಿತ್ರಕಲೆ-ಲಕ್ಷ್ಮಣ ತೆಕ್ಕಡ ಗಣಗೂರು, ಪತ್ರಿಕೋದ್ಯಮ- ತೇಲಪಂಡ ಕವನ್ ಕಾರ್ಯಪ್ಪ, ಶಿಕ್ಷಣ- ಸತೀಶ್ ಮುಳ್ಳೂರು, ಸಂಗೀತ- ನಾಗಮ್ಮ ಕಾಳಪ್ಪ, ಸಹಕಾರ- ಎನ್.ಬಿ. ನಾಗಪ್ಪ, ವೈದ್ಯಕೀಯ - ಡಾ. ಸುಪರ್ಣ, ಪೌರಕಾರ್ಮಿಕ - ಎಂ.ಎ. ಸದ ವಸಂತ್ ಅವರುಗಳನ್ನು ಅಭಿನಂದಿಸಲಾಯಿತು.

ಇದರೊಂದಿಗೆ ಸಿನಿಮಾ ಕ್ಷೇತ್ರದಿಂದ ಟಿ.ಆರ್. ಪ್ರಭುದೇವ್, ಜನಪದ-ಪ್ರವೀಣ್ ಚೌಡ್ಲು, ಹಿರಿಯ ನಾಗರಿಕ ಕೆ.ಬಿ. ಬೋಜಪ್ಪ, ಕೃಷಿ- ಡಿ.ಬಿ. ಧರ್ಮಪ್ಪ, ದೇಶಸೇವೆ-ಕೆ.ವಿ. ಮಂಜುನಾಥ್, ಯುವ ಪ್ರತಿಭೆ- ಶ್ರೇಷ್ಠ ಭರತ್, ಅಂಗನವಾಡಿ ಸೇವೆ- ಎಂ.ಸಿ. ಚಂದ್ರಲೇಖ, ಶಿಲ್ಪಕಲೆ-ಮಂಜುನಾಥ್ ಆಚಾರ್ಯ, ಗ್ರಾಮೀಣ ಸೇವೆ- ಅನಿತ ಅವರುಗಳನ್ನು ಸನ್ಮಾನಿಸಲಾಯಿತು.

ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ, ಸಮ್ಮೇಳನಾಧ್ಯಕ್ಷೆ ಜಲಾ ಕಾಳಪ್ಪ, ಉಪನ್ಯಾಸಕ ತಿಲಗಾರ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಜಿ.ಪಂ. ಮಾಜೀ ಸದಸ್ಯ ವಿ.ಪಿ. ಶಶಿಧರ್, ಕಸಾಪ ತಾಲೂಕು ಅಧ್ಯಕ್ಷ ವಿಜೇತ್, ಜಿಲ್ಲಾ ಕೋಶಾಧಿಕಾರಿ ಮುರಳೀಧರ್, ಪದಾಧಿಕಾರಿಗಳಾದ ಚಂದ್ರಶೇಖರ್, ರಾಘವಯ್ಯ, ಭರತ್‍ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಸನ್ಮಾನಿಸಿದರು.