ಸೋಮವಾರಪೇಟೆ, ಜು. 27: ನಗರ ಗೌಡ ಜನಾಂಗ ಒಕ್ಕೂಟದ ವಾರ್ಷಿಕ ಮಹಾಸಭೆ ಅಧ್ಯಕ್ಷ ಎಂ.ಎಂ. ಪ್ರಕಾಶ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಒಕ್ಕಲಿಗರ ಸಂಘದ ಸಮುದಾಯ ಭವನದಲ್ಲಿ ನಡೆಯಿತು.
ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿರುವ ಒಕ್ಕಲಿಗ ಜನಾಂಗ ಬಾಂಧವರನ್ನು ಸಂಘಟಿತಗೊಳಿಸುವ ನಿಟ್ಟಿನಲ್ಲಿ, ಒಕ್ಕೂಟಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಚರ್ಚೆ ನಡೆಯಿತು. ಇದರೊಂದಿಗೆ ಪಟ್ಟಣ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿ ಕಟ್ಟಡ ನಿರ್ಮಿಸುವ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ನಂತರ ನೂತನ ಸಾಲಿಗೆ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷರಾಗಿರುವ ಎಂ.ಎಂ. ಪ್ರಕಾಶ್‍ಕುಮಾರ್, ಗೌರವಾಧ್ಯಕ್ಷರನ್ನಾಗಿ ಸಿ.ಪಿ. ಗೋಪಾಲ್, ಉಪಾಧ್ಯಕ್ಷರನ್ನಾಗಿ ಹೆಚ್.ಬಿ. ಯೋಗೇಂದ್ರ, ಕಾರ್ಯದರ್ಶಿಯಾಗಿ ಡಿ.ಜೆ. ವೀರರಾಜು, ಉಪ ಕಾರ್ಯದರ್ಶಿಯಾಗಿ ಎಂ.ಬಿ. ಉಮೇಶ್, ಖಜಾಂಚಿಯಾಗಿ ಎಂ.ಜೆ. ದರ್ಶನ್, ಗೌರವ ಸಲಹೆಗಾರರಾಗಿ ಎಸ್.ಆರ್. ರಾಜು ಸೇರಿದಂತೆ 13 ಮಂದಿಯನ್ನು ನಿರ್ದೇಶಕರುಗಳನ್ನಾಗಿ ನೇಮಕಗೊಳಿಸಲಾಯಿತು.
ನಂತರ ಸಂಘದ ಸದಸ್ಯರಿಗೆ ವಿವಿಧ ಕ್ರೀಡಾಕೂಟ ಸ್ಪರ್ಧೆ ಹಾಗೂ ಮನೋರಂಜನಾ ಕಾರ್ಯಕ್ರಮ ನಡೆಯಿತು.