ಚೆಟ್ಟಳ್ಳಿ, ಜು. 27: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ತಾ. 26 ರಂದು ಸಂಜೆ ಹರಿಕೃಷ್ಣ ಮಂಗಳೂರು ವಿಭಾಗದ ವಿದ್ಯಾರ್ಥಿ ಪರಿಷದ್ ಪ್ರಮುಖ್ ಅವರ ನೇತೃತ್ವದಲ್ಲಿ ಗುರು ಪೂಜಾ ಕಾರ್ಯಕ್ರಮ ನಡೆಯಿತು.
ನಂತರ ಮಾತನಾಡಿದ ಅವರು ಪ್ರಪಂಚದಲ್ಲೇ ಭಾರತವು ಅನಾದಿ ಕಾಲದಿಂದಲೂ ವಿಜ್ಞಾನ ಹಾಗೂ ಸಂಖ್ಯಾ ಶಾಸ್ತ್ರದಲ್ಲಿ ಪರಿಣಿತಿಯನ್ನು ಹೊಂದಿದೆ. ವಿಶ್ವದ ಗಣಿತದಲ್ಲಿ ಸೊನ್ನೆಯನ್ನು ಮೊದಲಿಗೆ ಪರಿಚಯಿಸಿದ ಖ್ಯಾತಿಯು ಭಾರತಕ್ಕಿದೆ. ಗುರುಕುಲ ಶಿಕ್ಷಣವು ಪ್ರಪಂಚದಲ್ಲಿ ಋಷಿಮುನಿಗಳ ಕಾಲದಿಂದಲೂ ಭಾರತದಲ್ಲಿ ಪ್ರಸಿದ್ಧಿ ಪಡೆದಿತ್ತು. ಈಗ ಪಾಶ್ಚಾತ್ಯ ಹಾಗೂ ಮುಂದುವರಿದ ದೇಶಗಳಲ್ಲಿ ವಸತಿ ಶಾಲೆಗಳ ರೀತಿಯಲ್ಲಿ ನಮ್ಮ ಗುರುಕುಲ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಪ್ರಪಂಚದಲ್ಲಿ ಸಂಸ್ಕೃತ ಭಾಷೆ ಅತ್ಯಂತ ಹಳೆಯದ್ದು ಹಾಗೂ ಮಹತ್ವ ಉಳ್ಳದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಚೆಟ್ಟಳ್ಳಿಯ ಕಾಫಿ ಬೆಳೆಗಾರ ಮುಳ್ಳಂಡ ರತ್ತು ಚೆಂಗಪ್ಪ ಅವರು ಭಾಗವಹಿಸಿದ್ದರು. ಲಕ್ಕಂದ್ರ ಜಯಂತ್ ಉಪಸ್ಥಿತರಿದ್ದರು. ಸುರೇಶ್ ಕಾರ್ಯಕ್ರಮ ನಿರೂಪಿಸಿ, ಬಿಜು ಪ್ರಾರ್ಥಿಸಿದರು. ಕಾರ್ಯಕ್ರಮದ ಮುಖ್ಯ ಸಂಚಾಲಕರಾಗಿ ಬಿ.ವೈ. ಬಾಬು, ಚೇತನ್, ಬಿ.ಆರ್. ಉದಯ, ನಿತಿನ್ ಬಿ.ಬಿ., ಯತೀಶ್, ಮಧುಸೂದನ್, ಮಣಿಕಂಠ, ಶೇಖರ್ ರೈ, ಮಾಧವ, ತಿರುಮಲ್ಲೇಶ್ವರ, ಪ್ರವೀಣ್ ಮುಂತಾದವರು ಹಾಜರಿದ್ದರು.