ಮಡಿಕೇರಿ, ಜು. 27: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮಡಿಕೇರಿ ಕೊಡವ ಸಮಾಜದ ಪೆÇಮ್ಮಕ್ಕಡ ಕೂಟದ ವತಿಯಿಂದ ಕೊಡವ ತೀನಿ ನಮ್ಮೆ ತಾ.29 ರಂದು ಜರುಗಲಿದೆ.

ನಗರದ ಕೊಡವ ಸಮಾಜದಲ್ಲಿ ಬೆಳಿಗ್ಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕೊಡವ ಸಾಂಪ್ರದಾಯಿಕ ಖಾದ್ಯದ ಪ್ರದರ್ಶನ ಹಾಗೂ ಪೈಪೆÇೀಟಿ ಏರ್ಪಡಿಸಲಾಗಿದೆ.ಕೊಡವರ ಸಾಂಪ್ರದಾಯಿಕ ಹಿಟ್ಟು, ಉಪ್ಪಿನಕಾಯಿ, ಸಾರು, ಚಟ್ನಿಗಳನ್ನು ಮನೆಯಿಂದ ತಯಾರಿಸಿ ತಂದು ಪ್ರದರ್ಶನ ಹಾಗೂ ಪೈಪೆÇೀಟಿಯಲ್ಲಿ ಭಾಗವಹಿಸಬಹುದಾಗಿದೆ. ಇದರಲ್ಲಿ ಭಾಗವಹಿಸುವವರು ಕೊಡವ ಸಮಾಜದಲ್ಲಿ ಅಂದು ಬೆಳಿಗ್ಗೆ 9.30ಕ್ಕೆ ಆಗಮಿಸಿ ಹೆಸರು ನೋಂದಾಯಿಸಿ ಕೊಳ್ಳಬೇಕು. ಬರುವಾಗ ಪ್ರದರ್ಶನಕ್ಕೆ ಇಡಲು ಪಾತ್ರೆಗಳನ್ನು ಅವರೇ ತರಬೇಕು ಎಂದು ಕೊಡವ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ತಿಳಿಸಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಕೊಡವ ತೀನಿ ನಮ್ಮೆಯನ್ನು ವಿಧಾನ ಪರಿಷತ್ ಸದಸೆÀ್ಯ ಶಾಂತೆಯಂಡ ವೀಣಾ ಅಚ್ಚಯ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೆÇನ್ನಪ್ಪ ವಹಿಸುವರು. ಪ್ರದರ್ಶನ ಹಾಗೂ ಪೈಪೆÇೀಟಿಯನ್ನು ಮಡಿಕೇರಿ ಕೊಡವ ಸಮಾಜ ಪೆÇಮ್ಮಕ್ಕಡ ಕೂಟದ ಅಧ್ಯಕೆÀ್ಷ ಕನ್ನಂಡ ಕವಿತಾ ಬೊಳ್ಳಪ್ಪ ಉದ್ಘಾಟಿಸುವರು. ಮುಖ್ಯಅತಿಥಿಗಳಾಗಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ, ಕೊಡವ ಸಮಾಜಗಳ ಒಕ್ಕೂಟದ ಪೆÇಮ್ಮಕ್ಕಡ ಕೂಟದ ಅಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ಸಮಾಜ ಸೇವಕಿ ಬಾಚಮಂಡ ಗೌರಮ್ಮ ಮಾದಮ್ಮಯ್ಯ ಭಾಗವಹಿಸಲಿದ್ದಾರೆ.

ಇದೇ ಸಂದರ್ಭ ಕೊಡವ ಖಾದ್ಯಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ನಡೆಯಲಿದೆ. ಬಳಿಕ ಪೈಪೆÇೀಟಿ ಹಾಗೂ ಪ್ರದರ್ಶನದಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.