ಮಡಿಕೇರಿ, ಜು. 27: ಕಳೆದ ಮಾರ್ಚ್ 29ರಂದು ತಾನೋರ್ವ ಮುಂಬೈನ ಪ್ರಾದೇಶಿಕ ಕಂದಾಯ ಆಯುಕ್ತ ಎಂದು ಹೇಳಿಕೊಂಡು ಬಂದು ವೀರಾಜಪೇಟೆ ಹೊರ ವಲಯದ ರೆಸಾರ್ಟ್‍ನಲ್ಲಿ ತಂಗುವದರೊಂದಿಗೆ, ವಂಚಿಸಲು ಯತ್ನಿಸಿ ಪೊಲೀಸ್ ಅತಿಥಿಯಾಗಿದ್ದ. ನಕಲಿ ಅಧಿಕಾರಿಯೊಬ್ಬನ ಪ್ರಕರಣ ಸಂಬಂಧ ಇದೀಗ ವೀರಾಜಪೇಟೆ ನಗರ ಠಾಣೆಯ ಪೊಲೀಸನೊಬ್ಬ ಅಮಾನತುಗೊಂಡಿದ್ದಾರೆ. ಎಂ.ಎಸ್. ಬೋಪಣ್ಣ ಎಂಬಾತನೇ ಅಮಾನತು ಗೊಂಡಿರುವ ಮುಖ್ಯಪೇದೆ.
ಈತ ಘಟನೆಯ ದಿನದಂದು ರಾತ್ರಿ ತನಗೆ ಪರಿಚಿತ ಮಹಿಳೆ ಯೊಂದಿಗೆ ಸಂಭಾಷಣೆ ನಡೆಸಿದ್ದು, ತಾನು ನಕಲಿ ಅಧಿಕಾರಿ ಹಾಗೂ ಆತನ ಮಡಿಕೇರಿ, ಜು. 27: ಕಳೆದ ಮಾರ್ಚ್ 29ರಂದು ತಾನೋರ್ವ ಮುಂಬೈನ ಪ್ರಾದೇಶಿಕ ಕಂದಾಯ ಆಯುಕ್ತ ಎಂದು ಹೇಳಿಕೊಂಡು ಬಂದು ವೀರಾಜಪೇಟೆ ಹೊರ ವಲಯದ ರೆಸಾರ್ಟ್‍ನಲ್ಲಿ ತಂಗುವದರೊಂದಿಗೆ, ವಂಚಿಸಲು ಯತ್ನಿಸಿ ಪೊಲೀಸ್ ಅತಿಥಿಯಾಗಿದ್ದ. ನಕಲಿ ಅಧಿಕಾರಿಯೊಬ್ಬನ ಪ್ರಕರಣ ಸಂಬಂಧ ಇದೀಗ ವೀರಾಜಪೇಟೆ ನಗರ ಠಾಣೆಯ ಪೊಲೀಸನೊಬ್ಬ ಅಮಾನತುಗೊಂಡಿದ್ದಾರೆ. ಎಂ.ಎಸ್. ಬೋಪಣ್ಣ ಎಂಬಾತನೇ ಅಮಾನತು ಗೊಂಡಿರುವ ಮುಖ್ಯಪೇದೆ.
ಈತ ಘಟನೆಯ ದಿನದಂದು ರಾತ್ರಿ ತನಗೆ ಪರಿಚಿತ ಮಹಿಳೆ ಯೊಂದಿಗೆ ಸಂಭಾಷಣೆ ನಡೆಸಿದ್ದು, ತಾನು ನಕಲಿ ಅಧಿಕಾರಿ ಹಾಗೂ ಆತನ ಸ್ವತಃ ಕೊಡಗು ಜಿಲ್ಲಾಧಿಕಾರಿಗಳು ಆಸಕ್ತಿಯಿಂದ ತಿಳಿದುಕೊಂಡು; ಓರ್ವ ಪೊಲೀಸನಾದ ತನ್ನ ಮೊಬೈಲ್‍ಗೆ ಕರೆ ಮಾಡಿ ಮುಕ್ತ ಕಂಠದಿಂದ ಪ್ರಂಶಂಶಿ ಸಿರುವದಾಗಿ ಹೇಳಿಕೊಂಡಿರುವ ಪೊಲೀಸ್, ಮೇಲಧಿಕಾರಿ ಬಗ್ಗೆಯೂ ಏಕವಚನದಲ್ಲಿ ಪುಂಖಾನು ಪುಂಖವಾಗಿ ಏಕವಚನ ಬಳಸುತ್ತಾ, ತನ್ನ ಪ್ರಂಶಂಸೆ ಮಾಡಿಕೊಂಡಿರುವದು ಬೆಳಕಿಗೆ ಬಂದಿದೆ.
ಸರಿ ಸುಮಾರು ನಾಲ್ಕು ತಿಂಗಳ ಬಳಿಕ ಪೊಲೀಸ್ ಮುಖ್ಯಪೇದೆ ಬೋಪಣ್ಣ ಹಾಗೂ ಮಹಿಳೆಯೊಬ್ಬಳ ನಡುವಿನ ಅಂದಿನ ಈ ಸಂಭಾಷಣೆ ಪ್ರಸಕ್ತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಂತಾಗಿದ್ದು, ವಿಷಯ ಅರಿತ ವೀರಾಜಪೇಟೆ ಪೊಲೀಸ್ ಠಾಣಾಧಿಕಾರಿ ಮೇಲಧಿಕಾರಿಯ ಗಮನ ಸೆಳೆದಿದ್ದಾರೆ.
ಆ ಮೇರೆಗೆ ಡಿವೈಎಸ್ಪಿ ನಾಗಪ್ಪ ಅವರು ಬೋಪಣ್ಣ ಅವರನ್ನು ಕರ್ತವ್ಯದಿಂದ
(ಮೊದಲ ಪುಟದಿಂದ) ಅಮಾನತುಗೊಳಿಸಿ; ಮುಂದಿನ ಶಿಸ್ತು ಕ್ರಮಕ್ಕಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಸುಮನ ಡಿ. ಪಣ್ಣೇಕರ್ ಅವರಿಗೆ ಕೋರಿದ ಮೇರೆಗೆ ಎಸ್ಪಿ ಸಿಬ್ಬಂದಿಯ ಅಮಾನತಿನೊಂದಿಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಅಂದು ಒಡಿಸ್ಸಾ ಮೂಲದ ಸೌಮ್ಯರಂಜನ್ ಮಿಶ್ರಾ ಎಂಬ ವ್ಯಕ್ತಿ ವಿವಿಧ ಇಲಾಖೆಗಳಿಗೆ ವಂಚಿಸಿ ರೂ. 28 ಸಾವಿರ ಮೊತ್ತದಲ್ಲಿ ಐಷಾರಾಮಿ ಪ್ರವಾಸ ಕೈಗೊಂಡಿದ್ದಾರೆ, ಆತನ ಬಂಧನ ಪ್ರಕರಣದಲ್ಲಿ ತನ್ನನ್ನು ಪ್ರಂಶಂಸೆ ಮಾಡಿಕೊಳ್ಳುವ ಉತ್ಸಾಹದಲ್ಲಿ ಪೊಲೀಸ್ ಬೋಪಣ್ಣ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾನೆ. ಆ ಮೂಲಕ ಇಲಾಖಾ ಮಂದಿಗೆ ಒಂದು ರೀತಿ ಎಚ್ಚರಿಕೆಯ ಸಂಕೇತ ರವಾನೆಯಾದಂತಾಗಿದೆ.