ಪೊನ್ನಂಪೇಟೆ, ಜು. 27: ಕೋಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತನ್ನ ಕಾರ್ಯ ಕ್ಷೇತ್ರವಾದ ಕೋಟೂರು, ಬಲ್ಯಮುಂಡೂರು ಹಾಗೂ ತೂಚುಮಕೇರಿ ಗ್ರಾಮಗಳ 1495 ಸದಸ್ಯರನ್ನು ಹೊಂದಿದ್ದು, ವರದಿ ಸಾಲಿನಲ್ಲಿ ರೂ. 10.75 ಲಕ್ಷ ನಿವ್ವಳ ಲಾಭಗಳಿಸಿದೆ.
52 ಸ್ತ್ರೀ ಶಕ್ತಿ ಸಂಘಗಳು ಸಂಘದಲ್ಲಿ ವ್ಯವಹಾರ ನಡೆಸುತ್ತಿದೆ. ವರದಿ ಸಾಲಿನ ಲಾಭದಲ್ಲಿ ತನ್ನ ಸದಸ್ಯರಿಗೆ ಶೇ. 9 ಡಿವಿಡೆಂಡ್ ಪಾವತಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಸದಸ್ಯರ ಅನುಕೂಲಕ್ಕಾಗಿ ವರದಿ ಸಾಲಿನಲ್ಲಿ ಹತ್ಯಾರು ವಿಭಾಗ ಮಾರಾಟ ಮಾಳಿಗೆಯನ್ನು ಪ್ರಾರಂಭಿಸಿದ್ದು, ಕೃಷಿ ಉಪಕರಣ ಮಾರಾಟ ನಡೆಸುತ್ತಿದ್ದು, 55 ಲಕ್ಷ ಗೊಬ್ಬರ ಮಾರಾಟವಾಗಿದೆ. ತಾ. 29 ರಂದು ಸಂಘದ ಅಧ್ಯಕ್ಷ ಮುಂಡುಮಾಡ ಗಣೇಶ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ಮಹಾಸಭೆ ನಡೆಯಲಿದೆ.