ಸಿದ್ದಾಪುರ, 27: ಕÀರಡಿಗೋಡು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಕ್ಕಳ ಸಹಾಯವಾಣಿ 1098ರ ವತಿಯಿಂದ ಪೋಷಕರಿಗೆ ಹಾಗೂ ಮಕ್ಕಳಿಗೆ ವಿಶೇಷ ಅರಿವು ಕಾರ್ಯಕ್ರಮ ನಡೆಸಲಾಯಿತು.

ಮಕ್ಕಳ ಪೋಷಣೆ ಹಾಗೂ ರಕ್ಷಣೆಯ ಅಗತ್ಯತೆಯ ಬಗ್ಗೆ ನಡೆದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಸಹಾಯವಾಣಿಯ ಮುಖ್ಯಸ್ಥರಾದ, ಶೋಭಲಕ್ಷ್ಮಿ ಮಾತನಾಡಿ ಮಗುವೊಂದು ಅಸೌಖ್ಯವಾಗಿದ್ದು ಒಂಟಿಯಾಗಿರುವದನ್ನು ಕಂಡಾಗ ಹಾಗೂ ಮಗುವಿಗೆ ಆಶ್ರಯದ ಅಗತ್ಯವಿದ್ದಾಗ, ನಿರ್ಗತಿಕ ಹಾಗೂ ಕಾಣೆಯಾದ ಮಗುವನ್ನು ದೌರ್ಜನ್ಯಕ್ಕೆ ಒಳಗಾದ ಮತ್ತು ಹಿಂಸೆಗೆ ಒಳಗಾದ ಬಾಲಕಾರ್ಮಿಕ ಮತ್ತು ವಿಕಲಾಂಗಚೇತನ ಮತ್ತು ಪೋಷಣೆ ಹಾಗೂ ಸಂರಕ್ಷಣೆಯ ಅವಶ್ಯಕತೆ ಇರುವ ಎಲ್ಲಾ ಮಕ್ಕಳ ರಕ್ಷಣೆಗೆ, ಮಕ್ಕಳ ಸಹಾಯ ವಾಣಿ ಸಂಸ್ಥೆಯು ದಿನದ 24 ಗಂಟೆಗಳ ಕಾ¯ ಉಚಿತ ಮತ್ತು ತುರ್ತು ಸೇವೆಯನ್ನು ನೀಡುತ್ತಿದೆ ಎಂದರು.

ಇದೆ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ಹಾಗೂ ರಕ್ಷಣೆಯ ಬಗ್ಗೆ, ಬಾಲಕಾರ್ಮಿಕರ ನಿಷೇಧದ ಬಗ್ಗೆ ಮಾಹಿತಿ ನೀಡಿದರು. ನಂತರ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಭೆಯಲ್ಲಿ ಕಿರು ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳಾದ ಕುಮಾರಿ, ಕುಸುಮ, ಶಾಲೆಯ ಮುಖ್ಯ ಶಿಕ್ಷಕಿ ಮೋಳಿ, ಶಿಕ್ಷಕಿಯರಾದ ರುಕ್ಮಿಣಿ, ಶಾಲಾಭಿವೃದ್ಧಿ ಅಧ್ಯಕ್ಷ ಚಂದ್ರು, ಹಾಗೂ ಶಿಕ್ಷಕರು ಮತ್ತು ಪೋಷಕರು ಹಾಜರಿದ್ದರು. ಇದೆ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪಾದರಕ್ಷೆಗಳನ್ನು ವಿತರಿಸಲಾಯಿತು.