ನಾಪೋಕ್ಲು, ಜು. 27: ಇತ್ತೀಚೆಗೆ ಸುರಿದ ಮಳೆಯಿಂದ ಎಮ್ಮೆಮಾಡು ವ್ಯಾಪ್ತಿಯ ಗದ್ದೆ ಬಯಲುಗಳು ಜಲಾವೃತವಾಗಿದ್ದು ಭತ್ತದ ನಾಟಿಗಾಗಿ ಕೈಗೊಂಡಿದ್ದ ಸಸಿ ಮಡಿಗಳು ಕೊಳೆತು ನಷ್ಟ ಸಂಭವಿಸಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಭತ್ತದ ಬಿತ್ತನೆಯನ್ನು ಈ ಭಾಗದ ರೈತರು ಮಾಡಿದ್ದು ಮಳೆಯಿಂದ ಸಸಿ ಮಡಿಗಳು ಕೊಚ್ಚಿಹೋಗಿದ್ದು ನಷ್ಟ ಸಂಭವಿಸಿದೆ. ಗ್ರಾಮದ ಮಂಜೇರಿ ಅಬೂಬಕರ್, ಮಂಜೇರಿ ಇಸುಬು, ಇಬ್ರಾಹಿಂ, ಖಾದರ್ ಮುಸ್ಲಿಯಾರ್, ಚಕ್ಕೇರ ಮಹಮದ್, ಉಚ್ಚು ಮತ್ತಿತರರ ಗದ್ದೆಗಳಲ್ಲಿ ನಾಟಿಗಾಗಿ ಬಿತ್ತನೆ ಮಾಡಲಾಗಿದ್ದು ಇದೀಗ ಸಸಿ ಮಡಿಗಳು ಕೊಚ್ಚಿಹೋಗಿ ನಷ್ಟ ಅನುಭವಿಸುವಂತಾಗಿದೆ.