ಕೂಡಿಗೆ, ಜು. 28: ಕೂಡುಮಂಗಳೂರು ಸಮೀಪದ ಬಸವೇಶ್ವರ ಬಡಾವಣೆಯ ನಿವಾಸಿ ಸವಿತಾ ಎಂಬವರ ಮನೆಯಲ್ಲಿ ಚಿನ್ನ ಹಾಗೂ ನಗದು ಕಳ್ಳತನವಾಗಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲ್ಲಿನ ನಿವಾಸಿ ಸವಿತಾ ಎರಡು ದಿನಗಳ ಹಿಂದೆ ತನ್ನ ಮಗಳ ಮನೆಗೆ ತೆರಳಿದ್ದ ಸಂದರ್ಭ ಕಳ್ಳರು 200 ಗ್ರಾಂ ಚಿನ್ನ ಹಾಗೂ 50 ಸಾವಿರ ನಗದನ್ನು ದೋಚಿದ್ದಾರೆ. ಕುಶಾಲನಗರ ವೃತ್ತ ನಿರೀಕ್ಷಕ ಖ್ಯಾತೇಗೌಡ ಹಾಗೂ ಗ್ರಾಮಾಂತರ ಠಾಣಾಧಿಕಾರಿ ನವೀನ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದರು.

ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸಂದರ್ಭ ಎ.ಎಸ್.ಐ. ಅಪ್ಪಾಜಿ, ಬೆರಳಚ್ಚು ತಜ್ಞರಾದ ಪ್ರವೀಣ್, ಮನ್‍ಮೋಹನ್, ಶಿವು, ದೇವರಾಜು, ಮುಸ್ತಫಾ ಹಾಗೂ ಚಾಲಕ ಟಿ.ಆರ್. ರಾಜು ಇದ್ದರು.