ಗೋಣಿಕೊಪ್ಪಲು. ಜು. 28: ಕೊಡಗು ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಗೆ ಜಿಲ್ಲಾಧ್ಯಕ್ಷರಾಗಿ ಪೊನ್ನಂಪೇಟೆಯ ಗ್ರಾಮ ಪಂಚಾಯಿತಿ ಸದಸ್ಯ ಆರ್. ಚಂದ್ರಸಿಂಗ್ ಆಯ್ಕೆಗೊಂಡಿದ್ದಾರೆ. ಸಮಿತಿಯ ರಾಜ್ಯಧ್ಯಕ್ಷ ಡಾ. ಶಾಂತವೀರ ನಾಯ್ಕ ಇತ್ತೀಚೆಗೆ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನೇಮಕಾತಿ ಆದೇಶ ನೀಡಿದರು. ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ನ ಮುಖಂಡರಾದ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಚಂದ್ರಕಲಾ, ಮತ್ರಂಡ ದಿಲ್ಲು, ಅಜ್ಜಿಕುಟ್ಟಿರ ಪೊನ್ನು ಮುಂತಾದವರು ಹಾಜರಿದ್ದರು.