ಮಡಿಕೇರಿ, ಜು. 28: ನಿನ್ನೆ ರಾತ್ರಿ ಘಟಿಸಿದ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಕೆಲವರ ರಾಶಿ ಫಲದಲ್ಲಿ ದೋಷವಿದೆ ಎಂದು ಜ್ಯೋತಿಷ್ಯಾಸ್ತ್ರ ಹೇಳಿದ್ದರಿಂದ ಇಂದು ಜನರು ದೇವಾಲಯಗಳಿಗೆ ತೆರಳಿ ದೋಷ ಪರಿಹಾರಾರ್ಥ ಪೂಜಾದಿ ಸೇವೆ ಸಲ್ಲಿಸಿದರು. ವಿಶೇಷವಾಗಿ ಶಿವನ ದೇವಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೂಜೆ ಸಲ್ಲಿಸಿದರು. ಮಡಿಕೇರಿಯ ಶ್ರೀ ಓಂಕಾರೇಶ್ವರ ಸೇರಿದಂತೆ ಎಲ್ಲ ದೇವಾಲಯಗಳಲ್ಲೂ ಭಕ್ತರು ಪೂಜೆ ಸೇವೆ ಸಲ್ಲಿಸಿದರು.