ಮಡಿಕೇರಿ, ಜು. 28: ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಕರ್ಕಾಟಕ ಮಾಸದ ಪ್ರಯುಕ್ತ ತ್ರಿಕಾಲ ದುರ್ಗಾ ನಮಸ್ಕಾರ ಪೂಜಾ ಕಾರ್ಯಕ್ರಮವನ್ನು ತಾ. 31ರಂದು ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 6.45 ಗಂಟೆಯಿಂದ 7.30ರವರೆಗೆ ಗಣಪತಿ ಹೋಮ, ಬೆಳಿಗ್ಗೆ 7.45 ರಿಂದ 9 ಗಂಟೆಯವರೆಗೆ ಉಷಾ ಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ, 11 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಸಂಜೆ 6.30 ರಿಂದ 8 ಗಂಟೆಯವರೆಗೆ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.