ಕುಶಾಲನಗರ, ಜು. 28: ಕುಶಾಲನಗರ ಸಮೀಪದ ಹಾರಂಗಿ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಮನೆಯೊಂದು ಕುಸಿದು ಬಿದ್ದ ಘಟನೆ ಶನಿವಾರ ಮುಂಜಾನೆ ನಡೆದಿದೆ. ಅಲ್ಲಿನ ನಿವಾಸಿ ಮರಿಸ್ವಾಮಿ ಎಂಬವರ ಮನೆ ಕುಸಿದು ಬಿದ್ದಿದ್ದು ಯಾವದೇ ಪ್ರಾಣಾಪಾಯ ಉಂಟಾಗಿಲ್ಲ. ಮನೆಯ ಬಹುತೇಕ ಗೋಡೆಗಳು ಕುಸಿದು ಬಿದ್ದ ಪರಿಣಾಮ ಟಿವಿ, ಲ್ಯಾಪ್‍ಟಾಪ್, ಪೀಠೋಪಕರಣಗಳು, ಬಟ್ಟೆ ಬರೆ, ಅಡುಗೆ ಪರಿಕರಗಳು ಹಾನಿಗೀಡಾಗಿದ್ದು, ಅಂದಾಜು ರೂ. ಒಂದೂವರೆ ಲಕ್ಷ ನಷ್ಟಗೊಂಡಿದೆ ಎನ್ನಲಾಗಿದೆ.

ಸ್ಥಳಕ್ಕೆ ಸ್ಥಳೀಯ ಗ್ರಾ.ಪಂ. ಸದಸ್ಯ ಭಾಸ್ಕರ್ ನಾಯಕ್ ಮತ್ತು ಗ್ರಾಮ ಲೆಕ್ಕಿಗ ಸಚಿನ್ ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.