ವೀರಾಜಪೇಟೆ, ಜು. 28: ಪಟ್ಟಣ ಪಂಚಾಯಿತಿಯ ಮುಖ್ಯ ರಸ್ತೆಯ ಬದ್ರಿಯಾ ಜಂಕ್ಷನ್‍ನಿಂದ ಗೋಣಿಕೊಪ್ಪ ರಸ್ತೆಯ ಜಂಕ್ಷನ್‍ವರೆಗಿನ ಸುಣ್ಣದ ಬೀದಿಯ ಹೆಸರನ್ನು ಬದಲಾಯಿಸಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹೆಸರನ್ನು ಇಂದು ಅಧ್ಯಕ್ಷ ಇ.ಸಿ.ಜೀವನ್ ಹೊಸ ನಾಮಫಲಕ ಅನಾವರಣ ಮಾಡುವದರ ಮೂಲಕ ನಾಮಕರಣ ಮಾಡಲಾಯಿತು.

ಇದೇ ಸಂದÀರ್ಭದಲ್ಲಿ ಉಪಾಧ್ಯಕ್ಷೆ ತಸ್ನಿಂಅಕ್ತರ್, ಕಾವiಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ, ಮುಖ್ಯಾಧಿಕಾರಿ ಹೇಮಕುಮಾರ್, ಸದಸ್ಯರಾದ ದೇಚಮ್ಮ ಕಾಳಪ್ಪ, ಮ್ಯೆನುದ್ದಿನ್, ಸಚಿನ್ ಕುಟ್ಟಯ್ಯ, ಬಿ.ಡಿ ಸುನೀತಾ, ವಿಶ್ವನಾಥ್, ನಾಗಮ್ಮ, ಶೀಭಾ ಪ್ರಥ್ವಿನಾಥ್, ರತಿಬಿದ್ದಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.