ಮಾಧ್ಯಮಗಳ ವಿರುದ್ಧ ಸಿಎಂ ಗರಂ
ಬೆಂಗಳೂರು, ಜು.30 : ಮಾಧ್ಯಮಗಳಿಂದಾಗಿ ರಾಜ್ಯ ಹಾಳಾಗುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಪ್ರತ್ಯೇಕ ಉತ್ತರ ಕರ್ನಾಟಕ ಕೂಗಿಗೆ ಮಾಧ್ಯಮಗಳೇ ಕಾರಣ. ಉತ್ತರ ಕರ್ನಾಟಕ ವಿಷಯದಲ್ಲಿ ಬೆಂಕಿ ಹಚ್ಚುತ್ತಿರುವವರು ನೀವು. ಪ್ರತಿಯೊಂದು ವಿಷಯದಲ್ಲಿ ತಪ್ಪೇ ಕಾಣಿಸುತ್ತಾ ಹೋದರೆ. ರಾಜ್ಯ ಉದ್ಧಾರವಾಗಬೇಕೋ ಅಥವಾ ರಾಜ್ಯ ಹಾಳಾಗಬೇಕೋ ಅದು ನಿಮಗೆ ಸೇರಿದ್ದು ಎಂಬುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಅಖಂಡ ಕರ್ನಾಟಕ ಎಂಬುದನ್ನು ಮೊದಲೇ ಹೇಳಿದ್ದೇನೆ. ಆದರೆ ಪ್ರತ್ಯೇಕ ಉತ್ತರ ಕರ್ನಾಟಕ ಕೂಗಿಗೆ ಕುಮ್ಮಕ್ಕು ಕೊಟ್ಟವರು ನೀವೇ(ಮಾಧ್ಯಮ) ಎಂದು ಆರೋಪಿಸಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ನಾನು ಯಾವದೇ ಹೇಳಿಕೆ ಕೊಟ್ಟಿಲ್ಲ. ಆದರೆ ಮಾಧ್ಯಮಗಳಲ್ಲಿ ಇದರ ಬಗ್ಗೆಯೇ ಪದೇ, ಪದೇ ಚರ್ಚೆ ನಡೆಸಲಾಗುತ್ತಿದೆ ಎಂದು ದೂರಿದರು. ಉತ್ತರ ಕರ್ನಾಟಕದ ಜನ ನನ್ನ ಜೊತೆ ಇದ್ದಾರೆ ಮಾಧ್ಯಮದವರು ಪ್ರತಿದಿನ ನನ್ನನ್ನು ಟಾರ್ಗೆಟ್ ಮಾಡಿ ಸುದ್ದಿ ಪ್ರಸಾರ ಮಾಡಿ ಬೆಂಕಿ ಹಚ್ಚುತ್ತಿದ್ದಾರೆ. ಚನ್ನಪಟ್ಟಣದಲ್ಲಿ ನಾನು ಏನು ಹೇಳಿದೆ. ಸದನದಲ್ಲಿ ಶ್ರೀರಾಮುಲು ಚರ್ಚಿಸಿದ ವಿಷಯವನ್ನು ನಾನು ಮಾತನಾಡಿದೆ, ರಾಜ್ಯದ ಅಭಿವೃದ್ಧಿಗೆ ಎಲ್ಲಿ ಹಣ ತರುತ್ತಾರೆ ಎಂಬ ಬಗ್ಗೆ ಚರ್ಚಿಸಿದ ವಿಷಯವನ್ನು ನಾನು ಮಾತನಾಡಿದೆ, ನಾನು ಏನು ಹೇಳಿಯೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನ
ನವದೆಹಲಿ, ಜು.30 : ಮಲೇಷಿಯಾದಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯನನ್ನು ರಕ್ಷಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನವಾಗಿದೆ ಎಂದು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಮಧ್ಯ ಪ್ರದೇಶ ಮೂಲದ ಸಂಜೀವ್ ಎನ್ನುವವರನ್ನು ಮಲೇಷಿಯಾ ರಾಯಲ್ ಪೆÇಲೀಸರು ರಕ್ಷಿಸಿದ್ದಾರೆ. ಇದೇ ವೇಳೆ ರಾಯಲ್ ಮಲೇಷಿಯಾದ ಪೆÇಲೀಸರು ಮೂರು ಪಾಕಿಸ್ತಾನಿ ಅಪಹರಣಕಾರರನ್ನು ಬಂಧಿಸಿದ್ದಾರೆ. ಮಲೇಷಿಯಾ ಪೆÇಲೀಸರ ಈ ಯಶಸ್ವಿ ಕಾರ್ಯಾಚರಣೆಗಾಗಿ ಮಲೇಷಿಯಾದಲ್ಲಿರುವ ಭಾರತೀಯ ರಾಯಭಾರಿ ಮೃದುಲ್ ಕುಮಾರ್ ಮತ್ತವರ ತಂಡ ಪ್ರಶಂಸೆಗೆ ಅರ್ಹವಾಗಿದೆ ಸುಷ್ಮಾ ಸ್ವರಾಜ್ ಟ್ವಿಟ್ ಮಾಡಿದ್ದಾರೆ. ಅಪಹರಣಕ್ಕೀಡಾಗಿದ್ದ ಭಾರತೀಯ ಮೂಲದ ವ್ಯಕ್ತಿಯು ಬಿಡುಗಡೆಯಾಗಿದ್ದಾರೆ. ರಾಯಲ್ ಮಲೇಶಿಯನ್ ಪೆÇಲೀಸ್ ಕಾರ್ಯಾಚರಣೆ ನಡೆಸಿದ್ದು ಈ ಸಮಯದಲ್ಲಿ ಭಾರತೀಯ ಹೈಕಮಿಷನ್ ಮಲೇಷಿಯಾ ಪೆÇಲೀಸರೊಡನೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಮಲೇಷಿಯಾದಲ್ಲಿನ ಭಾರತೀಯ ಹೈ ಕಮಿಷನರ್ ತಮ್ಮ ಟ್ವಿಟ್ನಲ್ಲಿ ತಿಳಿಸಿದ್ದಾರೆ.
ಮೂವರು ವಿಜ್ಞಾನಿಗಳಿಗೆ ಜೀವಮಾನದ ಪ್ರಶಸ್ತಿ
ಬೆಂಗಳೂರು, ಜು.30 : ಜವಹರ್ ಲಾಲ್ ನೆಹರೂ ಕೇಂದ್ರದ ಇಬ್ಬರು ಮತ್ತು ಮತ್ತು ಐ ಐಎಸ್ ಸಿ ಸಂಸ್ಥೆಯ ಒಬ್ಬ ವಿಜ್ಞಾನಿಗೆ ಅವರ ತಮ್ಮ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳಿಗಾಗಿ ಭೂಮಿಯ ವಿಜ್ಞಾನಗಳ ಸಚಿವಾಲಯ ಪ್ರಶಸ್ತಿ ನೀಡಿದೆ. ಜವಹರ್ ಲಾಲ್ ನೆಹರು ವಿಜ್ಞಾನ ಸಂಸ್ಥೆಯ ಪೆÇ್ರ,ಕೆ.ಎಸ್ ವಾಲ್ಡಿಯಾ ಅವರು 2015 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದರು. ಈಗ ತಮ್ಮ ಜೀವಮಾನದ ಸಾಧನೆಗಾಗಿ, ಈ ಪ್ರಶಸ್ತಿ ನೀಡಲಾಗಿದೆ. ಐಐಎಸ್ ಸಿ ಪೆÇ್ರ ಶೇಖರ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪೆÇ್ರ ಕೌಶಲ್ಯ ರಾಜೇಂದ್ರನ್ ಅವರನ್ನು ಆಯ್ಕೆ ಮಾಡಲಾಗಿದೆ, ಮಹಿಳೆಯರನ್ನು ಈ ಕ್ಷೇತ್ರದಲ್ಲಿ ಈ ಬಾರಿ ಆಯ್ಕೆ ಮಾಡಲಾಗಿದೆ.
ಪೋಷಕರನ್ನು ನಿರ್ಲಕ್ಷಿಸಿದರೆ ವೇತನ ಕಟ್
ಗುವಾಹತಿ, ಜು.30 : ವಯಸ್ಸಾದ ಪೆÇೀಷಕರನ್ನು ನಿರ್ಲಕ್ಷಿಸಿ ಅವರನ್ನು ಬೀದಿ ತಳ್ಳುವ ದುಷ್ಟ ಮಕ್ಕಳಿಗೆ ಪಾಠ ಕಲಿಸಲು ಅಸ್ಸಾಂ ಸರ್ಕಾರ ಮಹತ್ವದ ಕಾನೂನನ್ನು ಜಾರಿಗೆ ತರಲು ಮುಂದಾಗಿದೆ. ಅಸ್ಸಾಂ ಸರ್ಕಾರ ನೂತನ ಕಾನೂನಿನ ಅನ್ವಯ ವಯಸ್ಸಾದ ಪೆÇೀಷಕರನ್ನು ನಿರ್ಲಕ್ಷಿಸಿದರೆ ಅಥವಾ ಅವರನ್ನು ಬೀದಿಗೆ ತಳ್ಳಿದರೆ ಅಂತಹ ವ್ಯಕ್ತಿಯ ವೇತನದಲ್ಲಿ ಕಡಿತ ಮಾಡುವ ಹೊಸ ಕಾನೂನು ಜಾರಿ ಮಾಡಲು ಮುಂದಾಗಿದೆ. ಮೂಲಗಳ ಪ್ರಕಾರ ಇದೇ ಅಕ್ಚೋಬರ್ 2ರಿಂದ ನೂತನ ಕಾನೂನು ಜಾರಿಯಾಗುವ ಸಾಧ್ಯತೆ ಇದೆ. ಆ ಮೂಲಕ ಇಂತಹುದೊಂದು ಕಾನೂನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಅಸ್ಸಾಂ ಪಾತ್ರವಾಗಲಿದೆ. ಆರಂಭದಲ್ಲಿ ಈ ಕಾನೂನನ್ನು ಸರ್ಕಾರಿ ಅಧಿಕಾರಿಗಳ ಮೇಲೆ ಜಾರಿ ಮಾಡಲಾಗುತ್ತಿದ್ದು, ಮುಂದಿನ ಬೆಳವಣಿಗೆಗಳನ್ನು ನೋಡಿಕೊಂಡು ಎಲ್ಲ ವಿಭಾಗದ ಉದ್ಯೋಗಸ್ಥರ ಮೇಲೂ ಹೇರಲೂ ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಪ್ರಮುಖವಾಗಿ ಈ ಹೊಸ ಕಾನೂನಿನ ಅನ್ವಯ ಯಾವದೇ ಆದಾಯದ ಮೂಲ ಇಲ್ಲದ ವಯಸ್ಸಾದ ಹಿರಿಯರು ಮತ್ತು ಅಂಗವೈಕಲ್ಯ ಸಂಬಂಧಿಕರನ್ನು ನಿರ್ಲಕ್ಷ ಮಾಡುವವರ ವೇತನದಲ್ಲಿ ಕಡಿತ ಮಾಡಲಾಗುತ್ತದೆ.
ಖೈದಿಯ ಹುಟ್ಟು ಹಬ್ಬ ಆಚರಣೆ
ಫೈಜಾಬಾದ್ ಜು.30 : ಖೈದಿಯೊಬ್ಬನಿಂದ ರೂ.1 ಲಕ್ಷ ಪಡೆದ ಜೈಲಿನ ಅಧಿಕಾರಿಗಳು, ಆತನ ಹುಟ್ಟು ಹಬ್ಬವನ್ನು ಆಚರಿಸಿರುವ ಆರೋಪವೊಂದು ಉತ್ತರಪ್ರದೇಶದ ಫೈಜಾಬಾದ್ ಜೈಲಿನ ವಿರುದ್ಧ ಕೇಳಿ ಬಂದಿದೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಿವೇಂದ್ರ ಸಿಂಗ್ ಫೈಜಾಬಾದ್ ಜೈಲಿನಲ್ಲಿದ್ದು. ಜು.23 ರಂದು ಈತನ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ. ವಿಚಾರಣೆ ಹಿನ್ನೆಲೆಯಲ್ಲಿ ಶಿವೇಂದ್ರ ಅವರನ್ನು ಇಂದು ವಿಚಾರಣೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಜೈಲರ್ ವಿನಯ್ ಕುಮಾರ್ ಅವರೇ ಹುಟ್ಟುಹಬ್ಬದ ಆಚರಣೆಗೆ ಸಿದ್ಧತೆ ಮಾಡಿದ್ದರು. ಇದಕ್ಕಾಗಿ ಜೈಲು ಸಿಬ್ಬಂದಿಗೆ ರೂ.1 ಲಕ್ಷ ಹಣ ನೀಡಲಾಗಿತ್ತು ಎಂದು ಆರೋಪಿಸಿದ್ದಾನೆ. ಎಲ್ಲವೂ ಆಗಿದ್ದು ಜೈಲರ್ ವಿನಯ್ ಕುಮಾರ್ ಅವರಿಂದ. ವಿನಯ್ ಅವರ ಸಿಬ್ಬಂದಿ ವಿಡಿಯೋ ಮಾಡಿ ಇದನ್ನು ಬಹಿರಂಗ ಪಡಿಸುವದಿಲ್ಲ ಎಂದು ಮಾತು ಕೊಟ್ಟಿದ್ದರು. ಆದರೆ, ಇದೀಗ ವಿಡಿಯೋ ಲೀಕ್ ಆಗಿದೆ ಎಂದು ತಿಳಿಸಿದಾನೆÉ.
ಫಿಸಿಕ್ಸ್ ಒಲಂಪಿಯಾಡ್ನಲ್ಲಿ 5 ಚಿನ್ನ
ನವದೆಹಲಿ, ಜು.30 : ಅಂತಾರಾಷ್ಟ್ರೀಯ ಫಿಸಿಕ್ಸ್ ಒಲಂಪಿಯಾಡ್ 2018 ರಲ್ಲಿ ಭಾರತದ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿದ್ದು, 5 ಚಿನ್ನದ ಪದಕ ಗೆದ್ದಿದ್ದಾರೆ. ಪೆÇೀರ್ಚುಗಲ್ ನ ಲಿಸ್ಬಾನ್ ನಲ್ಲಿ ನಡೆದ ಐಪಿಹೆಚ್ ಒ ದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ತಂಡದ ಪ್ರತಿಯೊಬ್ಬ ಸದಸ್ಯರೂ ಅದ್ಭುತ ಪ್ರದರ್ಶನ ನೀಡಿದ್ದು, 5 ಜನಕ್ಕೂ ಚಿನ್ನದ ಪದಕ ದೊರೆತಿದೆ. 21 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಎಲ್ಲಾ ವಿದ್ಯಾರ್ಥಿಗಳೂ ಚಿನ್ನದ ಪದಕ ಗೆದ್ದಿದ್ದಾರೆ. 86 ರಾಷ್ಟ್ರಗಳ ಪೈಕಿ ಐಪಿಹೆಚ್ ಒ ದಲ್ಲಿ ಗರಿಷ್ಠ ಚಿನ್ನದ ಪದಕ ಗಳಿಸಿರುವ ಮತ್ತೊಂದು ರಾಷ್ಟ್ರ ಚೀನಾ ಆಗಿದೆ. ಮುಂಬೈ ನ ಭಾಸ್ಕರ್ ಗುಪ್ತ, ಕೋಟಾದಿಂದ ಲೇ ಜೈನ್, ರಾಜ್ ಕೋಟ್ ನಿಂದ ನಿಶಾಂತ್ ಅಭಂಗಿ, ಜೈಪುರದಿಂದ ಪವಾನ್ ಗೋಯಲ್, ಕೋಲ್ಕತ್ತಾದಿಂದ ಸಿದ್ಧಾರ್ಥ್ ತಿವಾರಿ ಅಂತಾರಾಷ್ಟ್ರೀಯ ಫಿಸಿಕ್ಸ್ ಒಲಂಪಿಯಾಡ್ 2018 ರಲ್ಲಿ ಭಾಗವಹಿಸಿದ್ದರು.
ಕರ್ನಾಟಕವನ್ನು ಪ್ರತಿನಿಧಿಸಲು ರಾಬಿನ್ ಸಿದ್ಧ
ಬೆಂಗಳೂರು, ಜು.30 : ಕರ್ನಾಟಕ ತಂಡದೊಂದಿಗೆ 15 ವರ್ಷ ಗುರುತಿಸಿಕೊಂಡಿದ್ದ ರಾಬಿನ್ ಉತ್ತಪ್ಪ ಕಳೆದ ಆವೃತ್ತಿಯಲ್ಲಿ ಸೌರಾಷ್ಟ್ರ ತಂಡಕ್ಕೆ ಆಡಲು ನಿರ್ಧರಿಸಿದ್ದರು. ಆದರೆ ಈಗ ಮತ್ತೊಮ್ಮೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಉತ್ಸುಕರಾಗಿದ್ದಾರೆ. ಮುಂಬರುವ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನಲ್ಲಿ ರಾಬಿನ್ ಉತ್ತಪ್ಪ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಮತ್ತೊಮ್ಮೆ ಕರ್ನಾಟಕಕ್ಕೆ ಕಮ್ ಬ್ಯಾಕ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನ್ನು ಉತ್ತಪ್ಪ ಸಂಪರ್ಕಿಸಿದ್ದು, ಕೆಪಿಎಲ್ ನಲ್ಲಿ ಭಾಗವಹಿಸಲು ಉತ್ಸಾಹ ತೋರಿದ್ದಾರೆ.