ಮಡಿಕೇರಿ, ಜು. 29: ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವವರಿಗೆ ಸಾಮಾಜಿಕ ಜವಾಬ್ದಾರಿಯೂ ಇದೆ ಎಂದು ಸುವರ್ಣ ವಾಹಿನಿ ಸುದ್ದಿ ಸಂಪಾದಕ ಅಜಿತ್ ಹನುಮಕ್ಕನವರ್ ನುಡಿದರು.ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಪ್ರೆಸ್‍ಕ್ಲಬ್ ಆಶ್ರಯದಲ್ಲಿ ಇಂದು ಜರುಗಿದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.ಪತ್ರಕರ್ತನಾದರೆ ಜೀವನ ನಿರ್ವಹಣೆ ಕಷ್ಟ ಅನ್ನೋ ಮಾತು ಹಲವು ವರ್ಷಗಳ ಹಿಂದೆ ಇತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿಯ ಬಗ್ಗೆ ತಿಳುವಳಿಕೆ ನೀಡುವ ಕಾರ್ಯವನ್ನು ಸಮಾಜ ಮಾಡುತ್ತಿದೆ. ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಕೆಲವರ ಹಿಡಿತದಲ್ಲಿದ್ದಾರೆ ಎಂಬುದು ಅತೃಪ್ತ ಆತ್ಮಗಳ ನರಳಾಟ ಎಂದು ವ್ಯಾಖ್ಯಾನಿಸಿದರು.

ಟಿಆರ್‍ಪಿ ಎಂಬುದು ಟಿವಿ ಮಾಧ್ಯಮಗಳಿಗೆ ವಿಷವರ್ತುಲದಂತೆ ಪರಿಣಮಿಸಿದೆ. ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸುವ ಮೂಲಕವೂ ಟಿಆರ್‍ಪಿ ಗಳಿಸಬಹುದು. ಪತ್ರಕರ್ತರು ಬದಲಾಗಬೇಕು ಎನ್ನುವ ವ್ಯಕ್ತಿಗಳು, ಜನರ ಅಭಿರುಚಿಯೂ ಬದಲಾಗಲು ಬೇಕಾದ ಅಭಿಯಾನ ಮಾಡಬೇಕು. ಇಂದು ವೈಭವೀಕರಣದ ಸುದ್ದಿ ಗಳನ್ನೇ ಜನ ಹೆಚ್ಚು ನೋಡುತ್ತಾರೆ. ಜನ ನೋಡದಿದ್ದರೆ ಅಂಥ ಕಾರ್ಯಕ್ರಮಗಳನ್ನು ಮಾಡುವ ಪ್ರಮೇಯವೇ ಬರುವದಿಲ್ಲ ಎಂದರು.

ಪತ್ರಕರ್ತರು ಜಾತಿ, ಧರ್ಮಗಳ ಅಂತರವಿಲ್ಲದೆ ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸಬೇಕೆಂದು ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ. ಮಹೇಶ್ಚಂದ್ರ ಅಭಿಪ್ರಾಯ ಹಂಚಿಕೊಂಡರು. ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಹೇಶ್ಚಂದ್ರ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕರು ಪತ್ರಿಕೆಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸು ತ್ತಿದ್ದರು. ಮಾತ್ರವಲ್ಲದೆ ಅಂದಿನ ಪತ್ರಿಕೆಗಳು ಧಮನಿತರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂದರು.

ಮಾಧ್ಯಮಗಳು ಸರಕಾರ ಇದ್ದರೂ, ಇರದಿದ್ದರೂ ಇರುತ್ತವೆ. ಜನರ ಕಣ್ಣೀರೊರೆಸುವ ಕಾರ್ಯವನ್ನು ಪ್ರತಿಯೊಬ್ಬ ಪತ್ರಕರ್ತರು ಮಾಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕಳೆದ ಮೂರು ವರ್ಷದ ಅವಧಿಯಲ್ಲಿ ಸಂಘದ ವತಿಯಿಂದ ಹಲವು ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಪತ್ರಕರ್ತರ ಮಕ್ಕಳಿಗೆ ಹುರುಪು ತುಂಬುವ ನಿಟ್ಟಿನಲ್ಲಿ ಸಾಧಕ ಮಕ್ಕಳಿಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಮೂರು ವರ್ಷದಿಂದ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಹ್ಮಣಿ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ವೇದಿಕೆಯಲ್ಲಿದ್ದರು. ಕುಡೆಕಲ್ ನಿಹಾಲ್

(ಮೊದಲ ಪುಟದಿಂದ) ಪ್ರಾರ್ಥಿಸಿದರು. ರೆಜಿತ್ ಕುಮಾರ್ ನಿರೂಪಿಸಿದರು. ಪಾರ್ಥ ಚಿಣ್ಣಪ್ಪ ವಂದಿಸಿದರು.

ಅತಿಥಿಗಳ ವಾಗ್ವಾದ: ಅಜಿತ್ ಹನಮಕ್ಕನವರ್ ವೇದಿಕೆಯಲ್ಲಿ ಟಿವಿ ಮಾಧ್ಯಮದ ಬಗ್ಗೆ ಮಾತನಾಡುತ್ತಾ ಟಿವಿ ಮಾಧ್ಯಮಗಳು ಎದುರಿಸುತ್ತಿರುವ ಇಂದಿನ ಸ್ಥಿತಿಗತಿಗಳ ಬಗ್ಗೆ ವಿವರಿಸುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಮಹೇಶ್ಚಂದ್ರ, ಟಿ.ವಿ. ಮಾಧ್ಯಮಗಳು ಅಪರಾಧ, ಲೈಂಗಿಕ ಸುದ್ದಿಗಳನ್ನು ಹೆಚ್ಚು ವೈಭವೀಕರಣ ಮಾಡುವ ಮೂಲಕ ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಅನೇಕ ಯುವ ಜನತೆ ಇದರಿಂದ ಪ್ರೇರೇಪಣೆಗೊಂಡು ದುಷ್ಕøತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಮಹೇಶ್ಚಂದ್ರ ಗುರು ಅವರ ಹೇಳಿಕೆಯನ್ನು ಅಜಿತ್