ಬೆಂಗಳೂರು, ಜು. 31: ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ರಾಜ್ಯ ಅಧ್ಯಕ್ಷರಾಗಿ ಬೆಂಗಳೂರಿನ ವಿಶ್ರಾಂತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ, ಮೂಲತಃ ಕೊಡಗು ಜಿಲ್ಲೆಯವರಾದ ಕೆ.ಬಿ. ಚಂಗಪ್ಪ ಅವರನ್ನು ಸರಕಾರ ನೇಮಕಾತಿ ಮಾಡಿ ಆದೇಶ ಹೊರಡಿಸಿದೆ.ಸದಸ್ಯರುಗಳಾಗಿ ಲೋಕಸೇವಾ ಆಯೋಗದ ಸದಸ್ಯ ಎಸ್.ಹೆಚ್. ದುಗ್ಗಪ್ಪ, ಲೋಕಾಯುಕ್ತ ವಿಶೇಷ ತನಿಖಾ ತಂಡದ ಆರಕ್ಷಕ ಮಹಾ ನಿರೀಕ್ಷಕ ಸೌಮೇಂದ್ರ ಮುಖರ್ಜಿ, ಕನ್ವೀನರ್ ಆಗಿ ಸರಕಾರದ ಉಪ ಕಾರ್ಯದರ್ಶಿ ಜೆ.ಡಿ. ಮಧು ಚಂದ್ರ ತೇಜಸ್ವಿ ಅವರುಗಳನ್ನು ನೇಮಕ ಮಾಡಲಾಗಿದೆ.