*ಗೋಣಿಕೊಪ್ಪ, ಜು. 31: ಅಮ್ಮತ್ತಿ-ಬೆಟ್ಟಗೇರಿ ಗ್ರಾ.ಪಂ. ವ್ಯಾಪ್ತಿಯ ಕನ್ನಡ ಮಠದಲ್ಲಿ ಪ್ರತಿಬೆಳಕು ಕಾರ್ಯಕ್ರಮ ಜರುಗಿತು.

ಅಮ್ಮತ್ತಿ ಅನಘ ಕಾಫಿ ತೋಟ ವಲಯದ ಮಠದಲ್ಲಿ ‘ಮರೆಯಾಗುತ್ತಿರುವ ಕನ್ನಡ ಪದಗಳು’ ಎಂಬ ವಿಚಾರವಾಗಿ ಬೆಂಗಳೂರಿನ ದಂತ ವೈದ್ಯ ಎಂ. ಶಿವಕುಮಾರ್ ವಿಚಾರ ಮಂಡಿಸಿದರು. ಕನ್ನಡ ಮಠದ ಮಠಾಧಿಪತಿ ಚೆನ್ನಬಸವ ದೇಶಿಕೇಂದ್ರ ಸ್ವಾಮಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಪಿರಿಯಾಪಟ್ಟಣ ತಾಲೂಕು ಜುಡುಗೂಡು ಮಠದ ಅಧ್ಯಕ್ಷ ಅಪ್ಪಾಜಿ ಸ್ವಾಮಿ. ಕನಕನಗರ ತಾಲೂಕಿನ ಸರಗೂರು ಮಠದ ಸ್ವಾಮಿ ಮೃತ್ಯುಂಜಯ ಸ್ವಾಮಿ ಹಾಜರಿದ್ದರು.