ಶನಿವಾರಸಂತೆ, ಜು. 30: ಶನಿವಾರಸಂತೆ ಸಾರ್ವಜನಿಕ ರಸ್ತೆಯಲ್ಲಿ ತಾ. 28 ರಂದು ಮದ್ಯಪಾನ ಮಾಡಿ ಮೋಟಾರ್ ಸೈಕಲ್ ಚಾಲನೆ ಮಾಡಿದ ಯುವಕನಿಗೆ ನ್ಯಾಯಾಲಯ ರೂ. 3,100 ದಂಡ ವಿಧಿಸಿದ ಪ್ರಕರಣ ನಡೆದಿದೆ.
ಮಾಗಲು ಗ್ರಾಮದ ಪ್ರದೀಪ್ ಎಂಬಾತ ತಾ. 28 ರಂದು ಮದ್ಯಪಾನ ಮಾಡಿ ಮೋಟಾರ್ ಸೈಕಲ್ ಚಾಲನೆ ಮಾಡುತ್ತಿದ್ದಾಗ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಅವರು ಆಲ್ಕೊ ಮೀಟರ್ ಉಪಯೋಗಿಸಿ ಮದ್ಯಪಾನ ಮಾಡಿರುವದು ದೃಢಪಡಿಸಿ ಮೋಟಾರ್ ಸೈಕಲ್ (ನಂ. ಕೆ.ಎ. 53 ಕ್ಯೂ. 7795)ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ. ಪ್ರದೀಪ್ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯ ಆರೋಪಿಗೆ ರೂ. 3,100 ದಂಡ ವಿಧಿಸಿದ್ದು, ದಂಡ ಪಾವತಿಸಿ ಮೋಟಾರ್ ಸೈಕಲನ್ನು ಬಿಡಿಸಿಕೊಂಡಿರುತ್ತಾನೆ.