ಮಡಿಕೇರಿ, ಜು. 29: ಪ್ರಸಕ್ತ ಮುಂಗಾರುವಿನ ಮಳೆ ನಡುವೆ ಇಲ್ಲಿನ ಮಂಗಳೂರು ರಸ್ತೆಯಲ್ಲಿ ಪದೇ ಪದೇ ಸಮಸ್ಯೆ ಎದುರಾಗುತ್ತಿದ್ದು, ಇಂದು ನಗರದ ಹೊರವಲಯದಲ್ಲಿ ಹೆದ್ದಾರಿ ಮಧ್ಯೆ ಗುಂಡಿ ಬಿದ್ದು, ಅಪಾಯ ಗೋಚರಿಸಿದೆ. ಹೆದ್ದಾರಿಯ ಮಧ್ಯೆ ಮೂರ್ನಾಲ್ಕು ಅಡಿ ವಿಸ್ತೀರ್ಣ ದೊಂದಿಗೆ ಗುಂಡಿ ಕಾಣಿಸಿಕೊಂಡು, ಭಾರೀ ವಾಹನಗಳ ಸಂಚಾರಕ್ಕೆ ಕಷ್ಟಸಾಧ್ಯವಾಗಿದೆ.ಕೆಲವು ದಿನಗಳ ಹಿಂದೆ ನಗರದಿಂದ ಅನತಿ ದೂರದಲ್ಲಿ ರಸ್ತೆಯ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಆ ಬೆನ್ನಲ್ಲೇ ಜಿಲ್ಲಾ ಆಡಳಿತ ಭವನ ಎದುರುಗಡೆ ಭೂ ಕುಸಿತದೊಂದಿಗೆ ಸಂಚಾರಕ್ಕೆ ಮಡಿಕೇರಿ, ಜು. 29: ಪ್ರಸಕ್ತ ಮುಂಗಾರುವಿನ ಮಳೆ ನಡುವೆ ಇಲ್ಲಿನ ಮಂಗಳೂರು ರಸ್ತೆಯಲ್ಲಿ ಪದೇ ಪದೇ ಸಮಸ್ಯೆ ಎದುರಾಗುತ್ತಿದ್ದು, ಇಂದು ನಗರದ ಹೊರವಲಯದಲ್ಲಿ ಹೆದ್ದಾರಿ ಮಧ್ಯೆ ಗುಂಡಿ ಬಿದ್ದು, ಅಪಾಯ ಗೋಚರಿಸಿದೆ. ಹೆದ್ದಾರಿಯ ಮಧ್ಯೆ ಮೂರ್ನಾಲ್ಕು ಅಡಿ ವಿಸ್ತೀರ್ಣ ದೊಂದಿಗೆ ಗುಂಡಿ ಕಾಣಿಸಿಕೊಂಡು, ಭಾರೀ ವಾಹನಗಳ ಸಂಚಾರಕ್ಕೆ ಕಷ್ಟಸಾಧ್ಯವಾಗಿದೆ.
ಕೆಲವು ದಿನಗಳ ಹಿಂದೆ ನಗರದಿಂದ ಅನತಿ ದೂರದಲ್ಲಿ ರಸ್ತೆಯ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಆ ಬೆನ್ನಲ್ಲೇ ಜಿಲ್ಲಾ ಆಡಳಿತ ಭವನ ಎದುರುಗಡೆ ಭೂ ಕುಸಿತದೊಂದಿಗೆ ಸಂಚಾರಕ್ಕೆ (ಮೊದಲ ಪುಟದಿಂದ) ಬ್ಯಾರಿಕೇಡ್ ಅಳವÀಡಿಸಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಹೀಗಿದ್ದೂ ದಿನಗಳು ಉರುಳಿದಂತೆ ಮುಂಗಾರುವಿನ ನಡುವೆ ಭಾರೀ ಸಾಂದ್ರತೆಯ ವಾಹನಗಳ ಸಂಚಾರದಿಂದಾಗಿ, ಮಂಗಳೂರು ಹೆದ್ದಾರಿ ಮತ್ತೆ ಮತ್ತೆ ಹದಗೆಡುವಂತಾಗಿದೆ. ಬಿಸಿಲೆ ಹಾಗೂ ಚಾರ್ಮಾಡಿ ಹೆದ್ದಾರಿಯ ದುರಸ್ತಿ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಭಾರೀ ವಾಹನಗಳ ಒಡಾಟದ ಪರಿಣಾಮ ಮಂಗಳೂರು ಹೆದ್ದಾರಿ ಸಂಪೂರ್ಣ ಹದಗೆಡುವಂತಾಗಿದೆ.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಂಬಂಧಿಸಿದ ಅಧಿಕಾರಿಗಳು ಮೇಲಧಿಕಾರಿಗಳ ಗಮನ ಸೆಳೆದಿದ್ದಾರೆ. ಸಧ್ಯದಲ್ಲೇ ಮಡಿಕೇರಿ - ಮಂಗಳೂರು ರಸ್ತೆಯ ಅಲ್ಲಲ್ಲಿ ಎದುರಾಗುತ್ತಿರುವ ಅಪಾಯದ ಬಗ್ಗೆ ನುರಿತ ತಜ್ಞರು ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದು ಕಿರಿಯ ಹಂತದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಒಂದು ವೇಳೆ ಈಗಿನ ಅಪಾಯ ಹೆಚ್ಚಾಗಿ ಸಮಸ್ಯೆ ತಲೆದೋರಿದರೆ, ಮಡಿಕೇರಿ - ಭಾಗಮಂಡಲ ಹಾಗೂ ಮಡಿಕೇರಿ - ಸಂಪಾಜೆ ನಡುವೆ ಎಲ್ಲೆಡೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುವ ಸಂಭವ ಇಲ್ಲದಿಲ್ಲ.
ನಾಲ್ಕೇರಿಯಲ್ಲಿ ಗುಂಡಿ : ಇದೇ ರೀತಿ ದಕ್ಷಿಣ ಕೊಡಗಿನ ನಾಲ್ಕೇರಿಯ ಪುಲ್ಲೇರಿ ರಸ್ತೆಯಲ್ಲಿ ಗುಂಡಿ ಕಾಣಿಸಿಕೊಂಡಿದ್ದು, ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುವಂತೆ ಅಲ್ಲಿನ ನಿವಾಸಿ, ಮುಕ್ಕಾಟಿರ ಕಾವೇರಮ್ಮ ‘ಶಕ್ತಿ’ ಮುಖಾಂತರ ಸಲಹೆ ನೀಡಿದ್ದಾರೆ.