ನಾಪೆÇೀಕ್ಲು, ಜು. 29: ನೆಲಜಿ ಪ್ರಾಥಮಿಕ ಕೃಪಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು 24,58,465 ರೂ. ಲಾಭಗಳಿಸಿದೆ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೀಯಕಪೂವಂಡ ಎಂ.ಅಪ್ಪಚ್ಚು ತಿಳಿಸಿದರು.ಸಂಘದ ಸಭಾಂಗಣದಲ್ಲಿ ನಡೆದ 2017-18ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ ಸುಮಾರು 1200 ಸದಸ್ಯರಿದ್ದು, ಪಾಲು ಬಂಡವಾಳ 129.60 ಕೋಟಿ ರೂ. ಇದೆ. ಸುಮಾರು 259.79 ಕೋಟಿ ರೂ. ಠೇವಣಿ ಹೊಂದಿದ್ದು, ಸಂಘದ ಸದಸ್ಯರಿಗೆ 1074.61 ಕೋಟಿ. ರೂ.ಗಳನ್ನು ಸಾಲವಾಗಿ ನೀಡಿದೆ ಎಂದರು.ಶೇ. 95ರಷ್ಟು ಸಾಲವನ್ನು ವಸೂಲಿ ಮಾಡಲಾಗಿದ್ದು, ‘ಬಿ’ ಶ್ರೇಣಿಯಲ್ಲಿದೆ. ಅಲ್ಲದೆ 494 ಸದಸ್ಯರಿಗೆ ಸರಕಾರದ ಸಾಲ ಮನ್ನಾ ಯೋಜನೆಯಡಿಯಲ್ಲಿ 232.52 ಕೋಟಿ ರೂ. ಸಾಲ ಮನ್ನಾ ನೀಡಲಾಗಿದೆ. ಪ್ರಸ್ತುತ ಸಂಘವು 46.95 ಕೋಟಿ ರೂ. ವ್ಯವಹಾರ ನಡೆಸುತ್ತಿದ್ದು, ದುಡಿಯುವ ಬಂಡವಾಳ 1196.26 ರೂ. ಹೊಂದಿದೆ ಎಂದು ತಿಳಿಸಿದರು.
ಸಂಘದ ವತಿಯಿಂದ ಸದಸ್ಯರಿಗೆ ಕೆ.ಸಿ.ಸಿ ಸಾಲ, ಜಾಮೀನು ಸಾಲ, ವೇತನ ಆದಾರಿತ ಸಾಲ, ಸ್ವ-ಸಹಾಯ ಸಂಘದ ಸಾಲ, ಠೇವಣಿ ಮೇಲೆ ಸಾಲಗಳನ್ನು ವಿತರಿಸಲಾಗುತ್ತಿದೆ. ಸದಸ್ಯರಿಗೆ ಶೇ. 10ರಂತೆ ಡಿವಿಡೆಂಡ್ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮಾಳೆಯಂಡ ಎಂ.ಅಪ್ಪಚ್ಚ, ಮಂಡೀರ ಕೆ.ಪೆÇನ್ನಣ್ಣ, ಮಂಡೀರ ಎ.ಚಂಗಪ್ಪ, ಅಪ್ಪುಮಣಿಯಂಡ ಎಂ.ಸುಬ್ಬಯ್ಯ, ಕೈಬುಲೀರ ಉತ್ತಪ್ಪ, ಮುಕ್ಕಾಟಿರ ಕೆ.ಸುಬ್ಬಯ್ಯ, ತೆಕ್ಕಡ ಬಿ.ಪೆÇನ್ನಪ್ಪ, ಕೈಬುಲೀರ ಸಿ. ಯಶೋಧ, ಚೀಯಕಪೂವಂಡ ರೀನಾ, ಪಾಲೆ ಬಿ.ಮೋಟು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಸತ್ಯನಾರಾಯಣ ಇದ್ದರು.