ಸೋಮವಾರಪೇಟೆ, ಜು. 30: ಇತ್ತೀಚೆಗೆ ನಿಧನರಾದ ಕೊಡುಗೈ ದಾನಿ, ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿದ್ಯಾಲಯ ಕೇಂದ್ರ ಸ್ಥಾಪನೆಗೆ ಪ್ರಮುಖ ಕಾರಣಕರ್ತರಾದ ಬಿ.ಎಂ. ಮಲ್ಲಯ್ಯ ಅವರ ಸ್ಮರಣೆ ಕಾರ್ಯಕ್ರಮ ವಿದ್ಯಾಲಯದ ಆವರಣದಲ್ಲಿ ನಡೆಯಿತು.
ಬ್ರಹ್ಮಕುಮಾರಿ ವಿದ್ಯಾಲಯದ ದಾಕ್ಷಾಯಿಣಿ ಅವರು ಮಾತನಾಡಿ, ಬಿ.ಎಂ. ಮಲ್ಲಯ್ಯ ಅವರು ವಿದ್ಯಾ ಕೇಂದ್ರ ಮತ್ತು ಸಮಾಜದ ವಿವಿಧ ಆಯಾಮಗಳಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.
ನಿಷ್ಕಲ್ಮಶ ಮನಸ್ಸಿನಿಂದ ನೀಡುವ ದಾನಗಳು ಭಗವಂತನಿಗೆ ಸಲ್ಲಿಕೆಯಾಗುತ್ತದೆ. ಮರಣಾನಂತರವೂ ಆತ್ಮಕ್ಕೆ ಭಗವಂತನ ಹಾರೈಕೆ ಇರುತ್ತದೆ. ಈ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸುವ ಮನಸ್ಸುಗಳು ಹೆಚ್ಚಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿ.ಎಂ. ಗಣೇಶ್, ಎಂ.ಸಿ. ಮುದ್ದಪ್ಪ, ಬಗ್ಗನ ತಮ್ಮಯ್ಯ, ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಚಂದ್ರಶೇಖರ್, ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಮಲ್ಲಯ್ಯ ಅವರ ಸೇವೆಯನ್ನು ಸ್ಮರಿಸಿದರು.