ಮಡಿಕೇರಿ, ಜು. 31: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಥಮ ಆಡಳಿತ ಮಂಡಳಿಗೆ ಇತ್ತೀಚೆಗೆ ಚುನಾವಣೆ ನಡೆದಿದ್ದು, 13 ಸ್ಥಾನದಲ್ಲಿ 12 ಸ್ಥಾನ ಬಿಜೆಪಿ ಜಯಭೇರಿ ಸಾಧಿಸಿ, ಮೈತ್ರಿಕೂಟ ಒಂದು ಸ್ಥಾನ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬಹುಮತ ಪಡೆದ ಬಿಜೆಪಿಯ ಸಹಕಾರಿ ದುರೀಣ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿಯವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಮೋನಪ್ಪ ನಿಡ್ಯಮಲೆ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಾನಕಿ, ನಿರ್ದೇಶಕರಾದ ದೀನರಾಜ್ ಡಿ.ಸಿ., ಪ್ರಸನ್ನ ನೆಕ್ಕಿಲ, ಅಶೋಕ ಪಿ.ಎಂ., ಗಾಂಧಿಪ್ರಸಾದ್ ಬಂಗಾರಕೋಡಿ, ರೇಣುಕಾ ಕೆ.ಎಲ್., ಪ್ರಮೀಳಾ ಭಾರದ್ವಾಜ್, ಉದಯಕುಮಾರ್ ಆಚಾರ್, ದಾಸಪ್ಪ ಮಡಿವಾಳ, ಜಯರಾಮ ಪಿ.ಟಿ., ಶೇಷಪ್ಪ ಎನ್.ವಿ., ಕಿರಣ್ ಬಿ.ಎಲ್. ಇದ್ದರು.