ಮಡಿಕೇರಿ, ಜು. 31: ಚಿಕ್ಕಮುಂಡೂರು ವಿವಿಧೋದ್ದೇಶ ಸಹಕಾರ ದವಸ ಭಂಡಾರ ಕೃಷಿಕರ ಹಿತದೃಷ್ಟಿಯಿಂದ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಂದಿನ ಹಿರಿಯ ಸಹಕಾರಿಗಳು ಚಿಕ್ಕಮುಂಡೂರು ಗ್ರಾಮ ರೈತರ ಕಾರ್ಯ ಕ್ಷೇತ್ರವಾಗಿ ಆರಂಭಿಸಿದರು. 160 ಸದಸ್ಯರನ್ನು ಹೊಂದಿರುವ ದವಸ ಭಂಡಾರ ಜಿಲ್ಲೆಯಲ್ಲಿ ಮಾದರಿಯಾಗಿದ್ದು, ಕಳೆದ ಐದು ವರ್ಷಗಳಿಂದ ಗೊಬ್ಬರ ಮಾರಾಟವನ್ನು ಸಹ ಮಾಡುತ್ತಾ ರೈತರಿಗೆ ಅನುಕೂಲ ಕಲ್ಪಿಸಿದೆ. ವರದಿ ಸಾಲಿನಲ್ಲಿ 5.28 ಲಕ್ಷ ಸಾಲವನ್ನು ರೈತರಿಗೆ ನೀಡಿರುತ್ತದೆ. ಧವಸ ಭಂಡಾರದ ವಾರ್ಷಿಕ ಮಹಾಸಭೆ ಆಗಸ್ಟ್ 1 ರಂದು ದವಸ ಭಂಡಾರ ಅಧ್ಯಕ್ಷ ಮುಂಡುಮಾಡ ಗಣೇಶ್ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ.