ನಾಪೆÇೀಕ್ಲು, ಜು. 30: ಶೌಚಾಲಯದ ಗುಂಡಿಯಲ್ಲಿ ನೀರು ತುಂಬಿ ಶೌಚದ ಗುಂಡಿ ನೀರು ಈ ಬಾರಿಯ ಮಳೆಗಾಲದಿಂದ ಗುಂಡಿಯ ಮೇಲ್ಭಾಗದಲ್ಲಿ ಹರಿದು ಶೌಚಾಲಯಕ್ಕೆ ಹೋಗುವ ದಾರಿಯಲ್ಲೇ ಹರಿಯುತ್ತಿದ್ದು, ಶೌಚಾಲಯಕ್ಕೆ ಹೋಗುವ ಸಾರ್ವಜನಿಕರು ಇದೇ ಕೊಳಚೆ ನೀರಿನಲ್ಲಿ ನಡೆಯಬೇಕಿದ್ದು, ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಶಾಪ ಹಾಕುವಂತಾಗಿದೆ. ಇದರ ಪಕ್ಕದಲ್ಲೇ ತರಕಾರಿ ಅಂಗಡಿ ಇದ್ದು, ಅವರಿಗೂ ಇದರಿಂದ ತೊಂದರೆಯಾಗಿದೆ. ಗ್ರಾಮ ಪಂಚಾಯಿತಿಯ ಕೆಳ ಭಾಗದಲ್ಲಿ ಈ ಶೌಚಾಲಯ ಇದ್ದು ಪ್ರತಿ ದಿನ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಇದನ್ನು ನೋಡಿಕೊಂಡೆ ನಡೆದಾಡುತ್ತಿದ್ದರೂ, ಈ ಸುವಾಸನೆ ಅವರ ಗಮನಕ್ಕೆ ಬಾರದಿರುವದು ನೋಡಿದರೆ ಇವರಿಂದ ಏನೂ ಅಭಿವೃದ್ಧಿಯನ್ನು ಹೂಯಿಸಬಹುದಾಗಿದೆ? ಎಂದು ನಾಗರಿಕರು ದೂರಿದ್ದಾರೆ. ನಾಪೆÇೀಕ್ಲು ನಗರದಲ್ಲಿ ಅಶುಚಿತ್ವತೆ ತಾಂಡವವಾಡುತ್ತಿದ್ದು, ಆರೋಗ್ಯ ಇಲಾಖೆಯವರು ಕಣ್ಣು ಮುಚ್ಚಿ ಕುಳಿತ್ತ್ತಿದ್ದಾರೆ. ಶೌಚಾಲಯದ ನೀರು ದಾರಿಯಲ್ಲಿ ಹರಿಯುತ್ತಿದ್ದರೂ ಇದು ಆರೋಗ್ಯ ಇಲಾಖೆಯವರಿಗೆ ತಿಳಿದಿಲ್ಲವೇ? ನಾಗರಿಕರಿಗೆ ಇದರಿಂದ ಮಾರಕ ರೋಗ ಬರುವ ಸಾಧ್ಯತೆ ಇದ್ದು, ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳು ತಕ್ಷಣ ನಾಪೆÇೀಕ್ಲುವಿಗೆ ಭೇಟಿ ನೀಡಿ ಇದಕ್ಕೆ ಪರಿಹಾರ ಕಲ್ಪಿಸಿ, ಜನರ ಪ್ರಾಣ ಕಾಪಾಡಬೇಕೆಂದು ಆಗ್ರಹಿಸಿದ್ದಾರೆ.

- ದುಗ್ಗಳ