ಸೋಮವಾರಪೇಟೆ, ಆ. 2: ಪಟ್ಟಣದ ಕಕ್ಕೆಹೊಳೆ ಸಮೀಪದಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ರಾಮಾಯಣ ಮಾಸವಾದ ಆಟಿ ತಿಂಗಳ ದುರ್ಗಾದೀಪ ನಮಸ್ಕಾರ ಪೂಜೆ ಪ್ರತಿದಿನ ನಡೆಯುತ್ತಿದೆ.

ತಾ. 14ಕ್ಕೆ ದುರ್ಗಾದೀಪ ಪೂಜೆ ಅಂತ್ಯಗೊಳ್ಳಲಿದ್ದು ತಾ. 15 ರಂದು ಸ್ವಯಂವರ ಪಾರ್ವತಿ ಹೋಮ ನಡೆಯಲಿದೆ. ಕಳೆದ ಜುಲೈ 17 ರಿಂದ ಪ್ರತಿನಿತ್ಯ ಸಂಜೆ 6 ಗಂಟೆಯಿಂದ 8.30 ರವರೆಗೆ ದುರ್ಗಾದೀಪ ನಮಸ್ಕಾರ ಪೂಜೆಗಳು ಅರ್ಚಕರುಗಳಾದ ಮಣಿಕಂಠನ್ ನಂಬೂಧರಿ ಹಾಗೂ ಜಗದೀಶ ಉಡುಪರವರುಗಳ ಪೌರೋಹಿತ್ಯದಲ್ಲಿ ನಡೆಯುತ್ತಿದೆ.

ಆಟಿ ಪೂಜೆಯ ಕೊನೆಯ ದಿನವಾದ ತಾ. 15 ರಂದು ಬೆಳಿಗ್ಗೆ 9 ಗಂಟೆಯಿಂದ ಕಾಳೇಘಾಟ್‍ನ ಬ್ರಹ್ಮಶ್ರೀ ನಾರಾಯಣನ್ ತಂತ್ರಿಗಳ ಪೌರೋಹಿತ್ಯದಲ್ಲಿ ಶ್ರೀ ಭುವನೇಶ್ವರಿ ದೇವಿಗೆ ಸ್ವಯಂವರ ಪಾರ್ವತಿ ಹೋಮ ನಡೆಯಲಿದೆ.

ಮಹಾ ಸ್ವಯಂವರ ಪಾರ್ವತಿ ಹೋಮದ ಸೇವಾರ್ಥಕ್ಕೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು ಸೇವಾರ್ಥ ಬಯಸುವವರು ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9964996895 ಅಥವಾ 9448585509 ಅಥವಾ 9164905509ರಲ್ಲಿ ಸಂಪರ್ಕಿಸುವಂತೆ ದೇವಾಲಯ ಸಮಿತಿ ಕಾರ್ಯದರ್ಶಿ ಎನ್.ಟಿ. ಪ್ರಸನ್ನ ನಾಯರ್ ಮನವಿ ಮಾಡಿದ್ದಾರೆ.