ವೀರಾಜಪೇಟೆ, ಆ. 2: ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದು ಪತ್ನಿಗೆ ಪ್ರಚೋದಿಸಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಮತ್ತು ಅಪರ ಎರಡನೇ ಸೆಷನ್ಸ್ ನ್ಯಾಯಾಧೀಶರು ಪೊನ್ನಂಪೇಟೆಯ ವ್ಯಾಪಾರಿ ಚಂಗುಲಂಡ ರಾಣಾ ಎಂಬಾತನನ್ನು ಕ್ರಿಮಿನಲ್ ಪ್ರಕರಣದಲ್ಲಿ ದೋಷಮುಕ್ತನೆಂದೂ ತೀರ್ಪು ನೀಡಿ ಬಿಡುಗಡೆಗೊಳಿಸಿದ್ದಾರೆ.

ಪೊನ್ನಂಪೇಟೆಯ 5ನೇ ಬ್ಲಾಕ್‍ನ ಕಾಟ್ರಕೊಲ್ಲಿಯ ನಿವಾಸಿ, ಟಿ.ಪಿ.ಶ್ವೇತಾ ತಾ. 30.12.2014 ರಂದು ಆತ್ಮಹತ್ಯೆ ಮಾಡಿಕೊಂಡಿ ದ್ದರು. ಆಕೆ ಮನೆಯಲ್ಲಿಯೇ ಬರೆದಿಟ್ಟಿದ್ದ ಡೆತ್‍ನೋಟ್‍ನಲ್ಲಿ ಆತ್ಮಹತ್ಯೆಗೆ ರಾಣಾ ಕಾರಣ ಎಂದು ತಿಳಿಸಿದ್ದರಿಂದ ಡೆತ್‍ನೋಟ್‍ನ ಆಧಾರದ ಮೇಲೆ ಪತಿ ಮಂಜು ಇಲ್ಲಿನ ತಾಲೂಕು ತಹಶೀಲ್ದಾರ್ ಅವರಿಗೆ ದೂರು ನೀಡಿದ ಮೇರೆಗೆ ಪೊನ್ನಂಪೇಟೆ ಪೊಲೀಸರು ರಾಣಾ ವಿರುದ್ಧ 174 ರ ಸಿ.ಆರ್.ಪಿ.ಸಿ ರೀತಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಪ್ರಾಸಿಕ್ಯೂಷನ್ ಪ್ರಕರಣದ ನಿಜಾಂಶ ಸಾಬೀತು ಪಡಿಸುವಲ್ಲಿ ವಿಫಲ ಗೊಂಡಿರುವದರಿಂದ ಆರೋಪಿ ರಾಣಾ ಅವರನ್ನು ದೋಷಮುಕ್ತ ಎಂದು ತೀರ್ಪು ನೀಡಿದೆ. ಆರೋಪಿ ಪರ ಬಿ.ಆರ್.ಶೆಟ್ಟಿ ವಾದಿಸಿದರು.